ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಸೇನ್ 'ಪೋಲಿ' ಚಿತ್ರಗಳ ವಿರುದ್ಧದ ಅರ್ಜಿ ವಜಾ

By Staff
|
Google Oneindia Kannada News

ನವದೆಹಲಿ, ಸೆ. 9 : ಖ್ಯಾತ ವ್ಯಂಗ್ಯ ಚಿತ್ರಕಾರ ಎಂ.ಎಫ್.ಹುಸೇನ್ ಹಿಂದು ದೇವತೆಗಳನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಿ ಹಿಂದುಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ಸೋಮವಾರ ವಜಾಗೊಳಿಸಿದೆ. ದೇಶದ ಅನೇಕ ದೇವಾಲಯಗಳ ಮೇಲೆ ಇಂತಹ ಚಿತ್ರಗಳನ್ನು ಕಾಣಬಹುದಾಗಿದೆ. ಆದ್ದರಿಂದ ಈ ವಿಷಯ ಅಂಥಹ ಮಹತ್ವದ್ದಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರಿದ್ದ ನ್ಯಾಯಪೀಠ ಈ ಅರ್ಜಿಯನ್ನು ವಜಾಗೊಳಿಸಿದ್ದು, ದೇಶದ ಅನೇಕ ದೇವಾಲಯಗಳ ಮೇಲೆ ಹುಸೇನ್ ಚಿತ್ರಗಳಿಗೆ ಹೋಲಿಕೆ ಇರುವ ಚಿತ್ರಗಳು, ಕಲಾಕೃತಿಗಳನ್ನು ನೋಡಬಹುದಾಗಿದೆ. ಅದರ ಪ್ರೇರಣೆಯಿಂದ ಅಂಥಹ ಚಿತ್ರಗಳನ್ನು ರೂಪಿಸಲು ಸಾಧ್ಯವಾಗಿರಬಹುದು. ಆದ್ದರಿಂದ ಅರ್ಜಿಯಲ್ಲಿ ಪ್ರಶ್ನಿಸಿರುವಂತೆ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವಂಥ ಪ್ರಶ್ನೆಯೇ ಬರುವುದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಹಿಂದು ದೇವತೆಗಳನ್ನು ಅವಮಾನ ಮಾಡಿ ಚಿತ್ರಿಸಿರುವ ಎಂ.ಎಫ್. ಹುಸೇನ್ ಅವರ ಕ್ರಮವನ್ನು ಖಂಡಿಸಿ ಮಹಾರಾಷ್ಟ್ರದ ದ್ವೈಪಾಯನ ವೆಂಕಟೇಶಾಚಾರ್ಯ ವಾರ್ಕೆಡ್ ಕರ್ ಎಂಬ ಫಿರ್ಯಾದಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮತ್ತು ಗುಜರಾತ್ ನ್ಯಾಯಾಲಯಗಳಲ್ಲಿ ಪ್ರಕರಣದ ದಾಖಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X