ಮಿತ್ತಲ್ ಗೆ ಫೋರ್ಬ್ಸ್ ನ ಶ್ರೇಷ್ಠ ಸಾಧನೆ ಪ್ರಶಸ್ತಿ
ಸಿಂಗಪುರ, ಸೆ. 9 : ಭಾರತ ಮೂಲದ ಉಕ್ಕಿನ ಕೈಗಾರಿಕ ಕ್ಷೇತ್ರದ ದಿಗ್ಗಜ ಲಕ್ಷ್ಮಿ ಮಿತ್ತಲ್ ಅವರಿಗೆ ಜೀವಮಾನದ ಶ್ರೇಷ್ಠ ಸಾಧಕ ಪ್ರಶಸ್ತಿ ನೀಡಿ ಫೋರ್ಬ್ಸ್ ಸಂಸ್ಥೆ ಗೌರವಿಸಿದೆ. ಇಲ್ಲಿನ ಶಾಂಗ್ರೀಲಾ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಫೋರ್ಬ್ಸ್ ಸಂಸ್ಥೆಯ ಮುಖ್ಯಸ್ಥ ಸ್ಟೀವ್ ಫೋರ್ಬ್ಸ್ ಅವರು ಮಿತ್ತಲ್ ಅವರಿಗೆ ಪ್ರಶಸ್ತಿ ಫಲಕ ನೀಡಿದರು.
ಜೀವಮಾನದ ಸಾಧನೆಗಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿದ್ದರೂ ನಾನಿನ್ನು ದುಡಿಯುವುದು ಸಾಕಷ್ಟಿದೆ. ನನಗಿನ್ನೂ ದುಡಿಯುವ ಮನಸ್ಸಿದೆ, ವಯಸ್ಸಿದೆ ಎಂದು ಮಿತ್ತಲ್ ಪ್ರಶಸ್ತಿ ಸ್ವೀಕರಿಸಿ ಹೇಳಿದರು.ಇಲ್ಲಿ ಸೆ.8 ರಿಂದ ಸೆ. 10 ನಡೆಯುತ್ತಿರುವ ಗ್ಲೋಬಲ್ ಸಿಇಒ ಫೋರಂ ನಲ್ಲಿ ಭಾಗವಹಿಸಲು ಮಿತ್ತಲ್ ಆಗಮಿಸಿದ್ದಾರೆ.
ರಾಜಸ್ಥಾನದಲ್ಲಿ ಜನಿಸಿದ ಮಿತ್ತಲ್, 1976 ರಲ್ಲಿ ಮಿತ್ತಲ್ ಉಕ್ಕು ಕಾರ್ಖಾನೆ(ಈ ಮುಂಚೆ ಎಲ್ ಎನ್ ಎಂ ಕಂಪೆನಿ)ಯ ಸ್ಥಾಪಿಸಿದರು. ನಂತರ ಮಿತ್ತಲ್ ಉಕ್ಕು ಕಂಪೆನಿ ವಿಶ್ವದ ಅನೇಕ ದೊಡ್ಡ ಕಂಪೆನಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು, ಅತಿ ದೊಡ್ಡ ಉಕ್ಕು ಕಂಪೆನಿ ಎಂಬ ಕೀರ್ತಿ ಪಡೆಯಿತು. ಇದರಲ್ಲಿ ಅಂತಾರಾಷ್ಟ್ರೀಯ ಉಕ್ಕು ಸಮೂಹ ಹಾಗೂ ಆರ್ಸೆಲರ್ ಕಂಪೆನಿಗಳನ್ನು ಮಿತ್ತಲ್ ಸಮೂಹಕ್ಕೆ ಸೇರಿಸಿಕೊಂಡಿದ್ದು ಉಲ್ಲೇಖನೀಯ.
(ದಟ್ಸ್ ಕನ್ನಡ ವಾರ್ತೆ)
ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಮಾಯಾವತಿಗೆ ಸ್ಥಾನ
ಬೆಂಗಳೂರಿನ 'ಬಂಧನ್' ಫೋರ್ಬ್ಸ್ ಪಟ್ಟಿಯಲ್ಲಿ


Click it and Unblock the Notifications
