ಟಾಟಾ ಹಾದಿ ಹಿಡಿದ ಇನ್ಫೋಸಿಸ್, ವಿಪ್ರೊ

ಕೋಲ್ಕತ್ತಾ, ಸೆ. 9 : ನ್ಯಾನೋ ಕಾರು ಪ್ರಾಜೆಕ್ಟಿನ ಹಣೆಬರಹ ಹೀಗಾಯಿತು, ಇನ್ನು ಪಶ್ಚಿಮ ಬಂಗಾಳದಲ್ಲಿ ನಾಳೆ ಇನ್ನೇನಾಗುವುದೋ ಎಂಬ ಭಯದಿಂದ ಆ ನೆಲದಲ್ಲಿ ಬಂಡವಾಳ ಹೂಡಲು ಅಣಿಯಾಗಿದ್ದ ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿಗಳು ಕಾಲು ಹಿಂತೆಗೆಯಲು ಯೋಚಿಸುತ್ತಿವೆ. ಸಿಂಗೂರು ಪ್ರತಿಭಟನೆಯಿಂದಾಗಿ ಟಾಟಾ ಕಾರು ಉತ್ಪಾದನಾ ಘಟಕ ಸ್ಥಾಪನೆ ನಿಂತುಹೋದುದರ ಹಿನ್ನೆಲೆಯಲ್ಲಿ ಉಳಿದ ಕಂಪನಿಗಳು "ಯಾಕಪ್ಪಾ ಸುಮ್ನೆ ಈಯಮ್ಮನ(ಮಮತಾ ಬ್ಯಾನರ್ಜಿ) ಸಹವಾಸ" ಎನ್ನಲಾರಂಭಿಸಿವೆ.

"ಬಂಗಾಳದಲ್ಲಿನ ಉದ್ಯಮ ವಿರೋಧಿ ನೀತಿ ಹಾಗೂ ಪ್ರತಿಕೂಲ ರಾಜಕೀಯ ವಾತಾವರಣದಿಂದ ಅನೇಕ ಹೂಡಿಕೆದಾರರು ರಾಜ್ಯದಿಂದ ಕಾಲ್ತೆಗೆಯುತ್ತಿದ್ದಾರೆ. ಬಂಗಾಳದ ಬಗ್ಗೆ ಭಾರತೀಯರಿಗೆ ಇದ್ದ ಭರವಸೆ ಕುಗ್ಗಿದೆ. ಈ ಕಾರಣದಿಂದಾಗಿ ಆ ರಾಜ್ಯದ ಮೇಲೆ ನಮಗಿದ್ದ ನಂಬಿಕೆ ಸಹ ಕಳೆದುಹೋಗಿದೆ. ಕಂಪನಿಯ ವಿಸ್ತರಣೆ ಆಲೋಚನೆಗಳನ್ನು ಪುನರ್ ವಿಮರ್ಶೆಗೆ ಒಳಪಡಿಸಲು ಗಂಭೀರವಾಗಿ ಚಿಂತಿಸುತ್ತಿದ್ದೇವೆ" ಎಂದು ಇನ್ಫಿಯ ಮಾನವ ಸಂಪನ್ಮೂಲ ಅಧಿಕಾರಿ ಮೋಹನ್ ದಾಸ್ ಪೈ ಮಂಗಳವಾರ ಹೇಳಿದ್ದಾರೆ.

250 ಕೋಟಿ ರೂಪಾಯಿ ಬಂಡವಾಳ ಹೂಡಿ ಸುಮಾರು 5000 ಜನಕ್ಕೆ ಉದ್ಯೋಗ ಕಲ್ಪಿಸುವ ಇನ್ಫಿಯ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಕೋಲ್ಕತ್ತಾದ ಹೊರವಲಯದಲ್ಲಿ ಭೂಮಿ ಪಡೆದು ಕಂಪನಿಯ ಅಭಿವೃಧ್ಧಿ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಇನ್ಫಿ ಹಾಕಿಕೊಂಡಿತ್ತು.
ಇದನ್ನು ಮನಗಂಡ, ವಿಪ್ರೋ ಕೂಡ ಬಂಗಾಳದಲ್ಲಿ ಕಂಪನಿಯ ಕಾರ್ಯಚಟುವಟಿಕೆಯನ್ನು ವಿಸ್ತರಿಸಲು ಯೋಜನೆ ರೂಪಿಸಿತ್ತು. ಆದರೆ ತೃಣಮೂಲ ಪಕ್ಷದ ವಿರೋಧದಿಂದಾಗಿ ಬಂಗಾಳದತ್ತ ತಲೆಹಾಕಿ ಸಹ ಮಲಗಬಾರದು ಎಂದು ಕಂಪನಿಗಳು ಆಲೋಚಿಸುತ್ತಿವೆ.

(ಏಜೆನ್ಸೀಸ್)

ಇತ್ಯರ್ಥಗೊಂಡ ಸಿಂಗೂರ್ ಭೂವಿವಾದ
ಸಿಂಗೂರಿನ ಕಾರು ಘಟಕ ಮುಚ್ಚುವ ಚಿಂತನೆ:ಟಾಟಾ
ಸಿಂಗೂರಿನ ಭೂಮಿ ಮತ್ತೆ ರೈತರಿಗೆ ಧಕ್ಕದು: ಪ. ಬಂಗಾಳ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+