ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಮಡಿಕೇರಿ, ಸೆ.8: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದನ್ನು ಖಂಡಿಸಿ ಮಡಿಕೇರಿಯ ನಾಪೋಕ್ಲು ಬಳಿ ಸ್ತ್ರೀಶಕ್ತಿ ಮತ್ತು ಇತರೆ ಮಹಿಳಾ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.
ನಾಪೋಕ್ಲುವಿನ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುತ್ತಿದ್ದ ಪ್ರತಿಭಟನೆಕಾರರು ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಕಳೆದ ಒಂದು ವಾರದ ಹಿಂದೆ ವಯಸ್ಸಾದ ಹಸೈನರ್ ಅಲಿಯಾಸ್ ಅಚ್ಚಾವು ಎಂಬಾತ ಅಪ್ರಾಯ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಈ ಪಾಶವಿಕೃತ್ಯ ಎಸಗಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯ ನಂತರ ಅಚ್ಚಾವು ಸಂಬಂಧಿಕರು ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಪೋಷಕರ ಮೇಲೆ ಮಡಿಕೇರಿಯಲ್ಲಿ ದಾಳಿ ಮಾಡಿದ್ದರು.ವೈದ್ಯಕೀಯ ಪರೀಕ್ಷೆಗಾಗಿ ಬಾಲಕಿಯನ್ನು ಕೊಂಡೊಯುತ್ತಿದ್ದಾಗ ದಾಳಿ ಮಾಡಿದ ಅವರು ಅಚ್ಚಾವು ದೂರನ್ನು ಹಿಂತೆಗೆದುಕೊಳ್ಳುವಂತೆ ಪೋಷಕರಿಗೆ ಬೆದರಿಕೆ ಒಡ್ಡಿದ್ದರು. ಇದನ್ನು ಗಮನಿಸಿದ ಅಕ್ಕಪಕ್ಕದವರು ದಾಳಿಯನ್ನು ತಡೆದು ಅಚ್ಚಾವು ಸಂಬಂಧಿಕರನ್ನು ಪೊಲೀಸರಿಗೆ ಒಪ್ಪಿಸಿದರು.
ಬಾಲಕಿಯ ಪೋಷಕರ ಮೇಲೆ ದಾಳಿ ಮಾಡಿರುವ ಅಚ್ಚಾವು ಸಂಬಂಧಿಕರನ್ನು ಇದುವರೆಗೂ ಏಕೆ ಬಂಧಿಸಿಲ್ಲ. ಹಾಗೆಯೇ ಅವರ ವಿರುದ್ಧ ದೂರು ಸಹ ದಾಖಲಾಗದ್ದನ್ನು ವಿರೋಧಿಸಿದ ಪ್ರತಿಭಟನಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಾಚಾರಕ್ಕೆ ಒಳಗಾದ ಬಾಲಕಿ ಈಗ ಮಾನಸಿಕ ತೀರಾ ಅಸ್ವಸ್ಥರಾಗಿದ್ದಾರೆ. ಅವರಿಗೆ ಪರಿಹಾರ ಧನ ಕೊಡುವುದರ ಜೊತೆ ಅವರ ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications