ಹೈದರಾಬಾದ್ : ವಿಮಾನ ಅಪಘಾತ ಇಬ್ಬರು ಸಾವು
ಹೈದರಾಬಾದ್, ಸೆ. 8 : ನಗರದ ಸನ್ನತ್ ನಗರದ ಜನನಿಬಿಡ ಪ್ರದೇಶದಲ್ಲಿಂದು ಪೈಲೆಟ್ ನಿಯಂತ್ರಣ ತಪ್ಪಿ ವಿಮಾನ ಅಪಘಾತವಾಗಿರುವ ಹಿನ್ನೆಲೆಯಲ್ಲಿ ತರಬೇತಿ ಪಡೆಯುತ್ತಿರುವ ಪೈಲೆಟ್ ಹಾಗೂ ತರಬೇತಿದಾರ ಮೃತಪಟ್ಟಿರುವ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ.
ಶ್ರೀನಿವಾಸ ಮತ್ತು ನೀರಜ್ ಜೈನ್ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ. ಬೇಗಮ್ ಪೇಟೆಯ ತರಬೇತಿ ಸ್ಥಳದಿಂದ ಟೇಕಾಫ್ ವಿಮಾನ ಕೆಲವೇ ನಿಮಿಷದಲ್ಲಿ ಅಪಘಾತಕ್ಕೆ ಈಡಾಗಿದೆ. ತರಬೇತಿ ಪಡೆಯುತ್ತಿದ್ದ ಪೈಲೆಟ್ ಹೆಲಿಕಾಪ್ಟರ್ ಚಾಲನೆ ಮಾಡುತ್ತಿದ್ದ, ಆದರೆ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ನಗರದ ಜನಸಂದಣ ಪ್ರದೇಶವಾದ ಸನ್ನತ್ ನಗರದಲ್ಲಿ ಅಪಘಾತವಾಗಿದೆ. ಇದು ಆಂಧ್ರಪ್ರದೇಶ ಏವಿಯೇಷನ್ ಆಕಾಡೆಮಿಗೆ ಸಂಬಂಧಿಸಿದ ವಿಮಾನವಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಹೆಲಿಕಾಪ್ಟರ್ ಅಪಘಾತವಾದ್ದರಿಂದ ಸನ್ನತ್ ನಗರದ ನಿವಾಸಿಗಳ ಪ್ರಾಣ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಒಬ್ಬನಿಗೆ ಮಾತ್ರ ತೀವ್ರ ಪ್ರಮಾಣದ ಗಾಯವಾಗಿದೆ. ಅನೇಕ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications