ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್ ಗಢದಲ್ಲಿ ವಿದ್ಯುತ್ ಘಟಕಕ್ಕೆ ಸಂಪುಟ ಅಸ್ತು

By Staff
|
Google Oneindia Kannada News

ಬೆಂಗಳೂರು, ಆ. 28 : 5000 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಛತ್ತೀಸ್ ಗಢದ ರಾಯಪುರ್ ಜಿಲ್ಲೆಯ ಗೋದ್ನಾ ಪ್ರದೇಶದಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪಿಸಲು ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಅನುಮತಿ ದೊರೆತಿದೆ.

ಬುಧವಾರ ಸುದ್ದಿಗಾರರೊದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಯವರು ಅಮೆರಿಕ ಪ್ರವಾಸದ ಮುಗಿಸಿ ಮರಳಿದ ನಂತರ ಛತ್ತೀಸ್ ಗಢರಾಜ್ಯಕ್ಕೆ ಅಧಿಕೃತ ರಾಜ್ಯದ ಬೇಡಿಕೆಯನ್ನು ಸಲ್ಲಿಸಲಾಗುವುದು ಎಂದರು. ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ವಿರೋಧ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಎಲ್ಲ ನಾಯಕರ ಒಪ್ಪಿಗೆಯ ಮೇರೆಗೆ ಈ ಯೋಜನೆಗೆ ಕೈಹಾಕಲಾಗಿದೆ ಎಂದು ಸ್ಪಷ್ಟಪಡಿಸಿದರು.

ಛತ್ತೀಸ್ ಗಢದಲ್ಲಿ ರಾಜ್ಯದ ವಿದ್ಯುತ್ ಘಟಕ ಉತ್ಪಾದನೆ ಆರಂಭಿಸಿದರೆ ಶೇ. 56.2 ರಷ್ಟು ಹೆಚ್ಚಿನ ವಿದ್ಯುತ್ ಲಭ್ಯವಾಗಲಿದೆ. ವಾರ್ಷಿಕ 1118 ಕೋಟಿ ರುಪಾಯಿಗಳನ್ನು ಉಳಿತಾಯ ಮಾಡಬಹುದಾಗಿದೆ ಎಂದು ಕರಂದ್ಲಾಜೆ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ಕರ್ನಾಟಕದಿ ಹರಿಯಲಿದೆ ಛತ್ತೀಸ್ ಗಢದ ವಿದ್ಯುತ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X