ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ. 29 ರಂದು ಸೋರೆನ್ ವಿಶ್ವಾಸಮತ ಯಾಚನೆ

By Staff
|
Google Oneindia Kannada News

ರಾಂಚಿ, ಆ. 28 : ಬುಧವಾರದಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಮುಖಂಡ ಶಿಬು ಸೋರೆನ್ ಅವರ ನೂತನ ಸರ್ಕಾರ ಎರಡು ವಿಶೇಷ ಅಧಿವೇಶನವನ್ನು ಕರೆದಿದೆ. ಶುಕ್ರವಾರ (ಆ.29) ಸದನದಲ್ಲಿ ವಿಶ್ವಾಸಮತ ಕಾರ್ಯಕ್ರಮ ನಡೆಯಲಿದೆ.

ಕಳೆದ ಕೆಲ ದಿನಗಳಿಂದ ತೀವ್ರ ನಾಟಕೀಯ ಬೆಳವಣಿಗೆ ಕಂಡ ಜಾರ್ಖಂಡ ರಾಜಕೀಯ ಬುಧವಾರ ಶಿಬು ಸೋರೆನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಂತ್ಯಗೊಂಡಿತ್ತು. ರಾಜ್ಯಪಾಲ ಸಯ್ಯದ್ ರಝಿ ಶಿಬ್ತೆ ಅವರು ಸೋರೆನ್ ಅವರಿಗೆ ಪ್ರಮಾಣ ವಚನ ಗೌಪ್ಯತೆಯನ್ನು ಬೋಧಿಸಿದ್ದರು. ಸೋರೆನ್ ಜೊತಗೆ 11 ಮಂದಿ ಶಾಸಕರು ಸಂಪುಚ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸಿದ್ದರು. ಸ್ಟೀಪನ್ ಮರಾಂಡಿ(ಪಕ್ಷೇತರ), ಸುದೀರ್ ಮೆಹ್ತೂ(ಜೆಎಂಎಂ), ಕಮಲೇಶ್ ಕುಮಾರ್ ಸಿಂಗ್(ಎನ್ ಸಿಪಿ), ಅನೋಷ್ ಏಕ್ತಾ (ಪಕ್ಷೇತರ), ಹರಿನಾರಾಯಣ ರೈ(ಪಕ್ಷೇತರ), ನಳನಿ ಸೋರೆನ್(ಜೆಎಂಎಂ), ಜೋಬಾ ಮಹಿಜಾ(ಪಕ್ಷೇತರ), ಅಪರ್ಣಾ ಸೇನ ಗುಪ್ತಾ( ಫಾರ್ವರ್ಡ್ ಬ್ಲಾಕ್), ದುಲಾಲ್ ಬುವಾಯಿ(ಜೆಎಂಎಂ), ಭಾನು ಪ್ರತಾಪ್ ಸಾಹಿ(ಪಕ್ಷೇತರ) ಸಂಪುಟಕ್ಕೆ ಸೇರ್ಪಡೆಗೊಂಡವರಾಗಿದ್ದಾರೆ.

ಯುಪಿಎ ವಿಶ್ವಾಸಮತದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜೆಎಂಎಂ ನಾಯಕ ಶಿಬು ಸೋರೆನ್ ಅವರಿಗೆ ಜಾರ್ಖಂಡ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಮಧು ಕೊಡಾ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದರು. ಅದರಿಂದ ಬೇಸತ್ತಿದ್ದ ಸೋರೆನ್ ಯುಪಿಎ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ತಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಪರಿಸ್ಥಿತಿ ಅರಿತ ಕಾಂಗ್ರೆಸ್ ವರಿಷ್ಠರು ಮಧು ಕೊಡಾ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸೂಚನೆ ನೀಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ಸೋರೆನ್ ಸಿಎಂ ಆಗಿ ಪ್ರಮಾಣ ವಚನ ಸಾಧ್ಯತೆ
ಜಾರ್ಖಂಡ್: ಅತಂತ್ರವಾದ ಮಧು ಕೊಡಾ ಸರ್ಕಾರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X