ತೇಜಸ್ವಿ ಸ್ಮರಿಸಲು ಅವಿರತದಿಂದ ಗಯ್ಯಾಳಿಗಳ ನಾಟಕ

Subscribe to Oneindia Kannada

Aviratha celebrates tejawi birthday

ಬೆಂಗಳೂರು, ಆ. 27 : ಕನ್ನಡಸಾಹಿತಿ, ಮಾನವತಾವಾದಿ ದಿವಂಗತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 70 ನೇ ಹುಟ್ಟುಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಲು ಅವಿರತ ಟ್ರಸ್ಟ್ ನಿರ್ಧರಿಸಿದೆ.

ಸೆ.7 ರಂದು ಕುವೆಂಪು ಗೀತಗಾಯನ, ಕಥಾ ಕನವರಿಕೆ(ತೇಜಸ್ವಿ ಕಥೆಗಳಲ್ಲಿ ಬರುವ ಹಾಸ್ಯ ಪ್ರಸಂಗಗಳ ವಾಚನ) ಹಾಗೂ ರೂಪಾಂತರ ತಂಡದಿಂದ ಅ.ನಾ. ರಾವ್ ಜಾಧವ್ ಅವರ ನಿರ್ದೇಶನದಲ್ಲಿ ಕಿರಗೂರಿನ ಗಯ್ಯಾಳಿಗಳು ನಾಟಕವನ್ನು ಪ್ರದರ್ಶಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ರಂಗಕರ್ಮಿ ಡಿ.ಕೆ .ಚೌಟ ಅವರು ಆಗಮಿಸುತ್ತಿದ್ದಾರೆ. ನಾಟಕಕಾರ ಡಾ. ಕೆ.ವೈ .ನಾರಾಯಣ ಸ್ವಾಮಿ, ತೊ. ನಂಜುಂಡಸ್ವಾಮಿ, ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಹಾಗೂ ಅಗ್ನಿ ಪತ್ರಿಕೆಯ ಪತ್ರಕರ್ತ ಮಂಜುನಾಥ ಅದ್ದೆ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷ ಸತೀಶ್ ಗೌಡ ಹೇಳಿದರು.

ಸ್ಥಳ: ಡಾ. ರಾಜ್ ಕುಮಾರ್ ಕಲಾಕ್ಷೇತ್ರ, ರಾಜಾಜಿನಗರ, ಬೆಂಗಳೂರು
ದಿನಾಂಕ: ಸೆಪ್ಟೆಂಬರ್ 7
ಸಂಜೆ: 4ರ ನಂತರ

ಸೂಚನೆ: ಕಾರ್ಯಕ್ರಮ/ ನಾಟಕಕ್ಕೆ ಟಿಕೆಟ್ ನಿಗದಿಪಡಿಸಲಾಗಿದ್ದು, ಆಸಕ್ತರು ಮುಂಗಡವಾಗಿ ಪಡೆದುಕೊಳ್ಳಬೇಕಾಗಿ ಅವಿರತ ಟ್ರಸ್ಟ್ ನ ಅಧ್ಯಕ್ಷಕೆ.ಟಿ.ಸತೀಶ್ ಗೌಡ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಈಮೇಲ್ : kts_gowda@yahoo.com
ವೆಬ್ ತಾಣ: http://www.aviratha.org

ಪಣಿಧರ್: 99861 71176
ಗುರುಪ್ರಸಾದ್: 99002 45090

(ದಟ್ಸ್ ಕನ್ನಡ ಸಭೆ ಸಮಾರಂಭ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...