ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ಎಸ್ ಜಿ ಸಭೆ ವಿಫಲ : ಇಂದು ಉನ್ನತ ಸಭೆ ಆರಂಭ

By Staff
|
Google Oneindia Kannada News

ನವದೆಹಲಿ, ಆ. 25 : ಇತ್ತೀಚೆಗೆ ವಿಯನ್ನಾದಲ್ಲಿ ನಡೆದ ಅಣು ಸರಬರಾಜು ರಾಷ್ಟ್ರಗಳ ಸಭೆಯಲ್ಲಿ ಭಾರತ ಪರಮಾಣು ರಾಷ್ಟ್ರವಾಗುವ ಕುರಿತಂತೆ ಅಂತಿಮ ತೀರ್ಮಾನಕ್ಕೆ ಬರಲು ಭಾರತ ವಿಫಲವಾದ ಹಿನ್ನೆಲೆಯಲ್ಲಿ ಇಂದು ರಾಜಧಾನಿಯಲ್ಲಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಆರಂಭವಾಗಿದೆ.

ಎನ್ ಎಸ್ ಜಿ ಸಭೆಯಲ್ಲಿ ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ಅಧಿಕೃತ ಮುದ್ರೆಗೆ ಹಿನ್ನೆಡೆಯಾಗಿರುವುದರಿಂದ ಕರೆಯಲಾಗಿರುವ ಈ ಸಭೆಗೆ ಭಾರಿ ಮಹತ್ವದ ಬಂದಿದೆ. ಸಭೆಯಲ್ಲಿ ಮುಂದಿನ ಕಾರ್ಯಸೂಚಿಯ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಆ. 21 ಮತ್ತು 22 ರಂದು ವಿಯನ್ನಾದಲ್ಲಿ ನಡೆದ ಎನ್ಎಸ್ ಜಿ ಸಭೆಯ ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿದ ಪ್ರಧಾನಮಂತ್ರಿ ಆಪ್ತ ಸಲಹೆಗಾರ ಶ್ಯಾಮ್ ಶರಣ್, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರ ನೇತೃತ್ವದಲ್ಲಿ ವಿದೇಶಾಂಗ ಇಲಾಖೆ ಹಾಗೂ ಅಣು ಶಕ್ತಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ಆರಂಭವಾಗಿದೆ. ಇಂದಿನ ಸಭೆಯಲ್ಲಿ ವಿಯನ್ನಾದ ಸಭೆಯಲ್ಲಿ ನಡೆದ ಸಂಪೂರ್ಣ ಚರ್ಚೆ, ಮುಂದಿರುವ ಸವಾಲು, ಅದನ್ನು ಎದುರಿಸಬೇಕಾದ ರೀತಿ ಹೀಗೆ ಅನೇಕ ವಿಷಯಗಳು ಕುರಿತು ಮಾತುಕತೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮೊನ್ನೆ ನಡೆದ ಸಭೆಯಲ್ಲಿ ಎನ್ಎಸ್ ಜಿ ಕೆಲ ಸದಸ್ಯ ರಾಷ್ಟ್ರಗಳು ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಅಣು ಒಪ್ಪಂದಕ್ಕೆ ಸಹಿ ಹಾಕಬೇಕು ಎನ್ನುವುದಾದರೆ ಭಾರತವು ಸಿಟಿಬಿಟಿ ಹಾಗೂ ಎನ್ ಪಿಟಿ ಒಪ್ಪಂದಗಳಿಗೆ ಸಹಿ ಹಾಕಬೇಕು ಹಾಗೂ ಎನ್ಎಸ್ ಜಿ ಕಾನೂನಿಗೆ ಭಾರತ ಒಳಪಟ್ಟಲ್ಲಿ ಮಾತ್ರ ಒಪ್ಪಂದಕ್ಕೆ ಚಾಲನೆ ನೀಡಲಾಗುವುದು ಎಂದು ವಿಯನ್ನಾದ ಸಭೆಯಲ್ಲಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪರಮಾಣು ಒಪ್ಪಂದದ ಕುರಿತು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗದೆ ಸಭೆ ಮುಕ್ತಾಯವಾಗಿತ್ತು. ಆಸ್ಟ್ರೀಯಾ, ನ್ಯೂಜಿಲ್ಯಾಂಡ್ ಹಾಗೂ ಸ್ವಿಜರ್ ಲ್ಯಾಂಡ್ ದೇಶಗಳು ಭಾರತವು ಸಿಟಿಬಿಟಿ, ಎನ್ ಪಿಟಿ ಗೆ ಸಹಿ ಹಾಕದಿರುವ ಕ್ರಮವನ್ನು ಬಲವಾಗಿ ವಿರೋಧಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಸಿಟಿಬಿಟಿಗೆ ಸಹಿ ಹಾಕಲು ಭಾರತಕ್ಕೆ ಒತ್ತಾಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X