ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.27 ರಂದು ಕತ್ತಿ ಪ್ರಮಾಣ ವಚನ ಸ್ವೀಕಾರ : ಯಡಿಯೂರಪ್ಪ

By Staff
|
Google Oneindia Kannada News

ಬೆಂಗಳೂರು, ಆ. 25 : ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಉಮೇಶ್ ಕತ್ತಿ ಆ.27 ರಂದು ಸಂಜೆ 4 ಗಂಟೆ ರಾಜಭವನದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಈ ಮಧ್ಯೆ ಪಕ್ಷೇತರರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

ಆಪರೇಶನ್ ಕಮಲದ ಮೂಲಕ ಕೇಸರಿ ಪಕ್ಷದ ತೆಕ್ಕೆಗೆ ಬಿದ್ದಿರುವ ಉಮೇಶ ಕತ್ತಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ನಾಲ್ಕನೇ ಪಕ್ಷಾಂತರಿ ಶಾಸಕರಾಗಿದ್ದಾರೆ. ಈ ಹಿಂದೆ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರುಗಳು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಗೊಂಡಿದ್ದರು.ಯಡಿಯೂರಪ್ಪ ಅವರು ತಮ್ಮ ಸಂಪುಟದಲ್ಲಿ ಸ್ಥಾನ ಕಲ್ಪಿಸಕೊಟ್ಟಿದ್ದರು. ಅದೇ ಸಂದರ್ಭದಲ್ಲಿಯೂ ಕೂಡಾ ಉಮೇಶ್ ಕತ್ತಿ ಅವರು ಬಿಜೆಪಿ ಸೇರಲಿದ್ದಾರೆ ಎಂದು ದಟ್ಟವಾಗಿ ಸುದ್ದಿ ಹಬ್ಬಿತ್ತು. ಆದರೆ ಕಾರಣಾಂತರಗಳಿಂದ ಕತ್ತಿ ಅವರ ಬಿಜೆಪಿ ಸೇರ್ಪಡೆ ವಿಳಂಬವಾಗಿತ್ತು. ನಂತರ ಬಿಜೆಪಿ ವರಿಷ್ಠರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿದ ಉಮೇಶ ಕತ್ತಿ ಕೆಲ ದಿನಗಳ ಹಿಂದೆ ಬಿಜೆಪಿ ಸೇರಿಕೊಂಡಿದ್ದರು.

ಕತ್ತಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಸಲುವಾಗಿ ಬಿಜಾಪುರ ಜಿಲ್ಲೆಯ ಏಕೈಕ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರನ್ನು ಸಂಪುಟದಿಂದ ಕೈಬಿಡುವ ನಿರ್ಧರಿಸಲಾಗಿತ್ತು. ಭಾನುವಾರ ಸಂಜೆ ಬೆಳ್ಳುಬ್ಬಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದರು. ಅದರಿಂದ ಕತ್ತಿ ಅವರು ಸಂಪುಟ ಸೇರ್ಪಡೆ ಸರಳವಾಗಿದೆ. ಬಿಜೆಪಿ ಗುರುಪಾದಪ್ಪ ನಾಗಮಾರಪಳ್ಳಿ, ಬಾಬುರಾವ್ ಚಿಂಚನಸೂರ್, ಜಗಳೂರು ರಾಮಚಂದ್ರ, ವಿ.ಸೋಮಣ್ಣ ಬಿಜೆಪಿ ಸೇರ್ಪಡೆ ಸುದ್ದಿ ಬಲವಾಗಿ ಇದೆ. ಆದರೆ ಬೆಳ್ಳುಬ್ಬಿ ತಲೆದಂಡದಿಂದ ಉಂಟಾಗಿರುವ ಪ್ರತಿಭಟನೆ ಯಡಿಯೂರಪ್ಪ ಭಯಕ್ಕೆ ಬಿದ್ದಿರುವ ಕಾರಣ ಕೃಷ್ಣಯ್ಯ ಶೆಟ್ಟಿ, ಸುರೇಶಕುಮಾರ, ಮುರುಗೇಶ್ ನಿರಾಣಿ, ರಾಮಚಂದ್ರಗೌಡ ಅವರನ್ನು ಸಂಪುಟದಲ್ಲಿ ಮುಂದುವರೆಸಿಕೊಂಡು ಹೋಗುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಬೆಳ್ಳುಬ್ಬಿ ರಾಜೀನಾಮೆ, ಉಮೇಶ್ ಕತ್ತಿಗೆ ಸ್ಥಾನ
ಅಕ್ಕ' ಸಮ್ಮೇಳನಕ್ಕೂ ಮುಂಚೆ ಸಂಪುಟ ಪುನಾರಚನೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X