ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಮಿ ನಿಷೇಧ ಮುಂದುವರಿಕೆ : ಸುಪ್ರಿಂಕೋರ್ಟ್

By Staff
|
Google Oneindia Kannada News

ನವದೆಹಲಿ, ಆ. 25 : ದೇಶದ್ರೋಹ ಕೆಲಸದಲ್ಲಿ ಸಕ್ರಿಯವಾಗಿರುವುದರ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಉಗ್ರವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಸಿಮಿ ಸಂಘಟನೆಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಸುಪ್ರಿಂಕೋರ್ಟ್ ಮುಂದುವರೆಸಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 24 ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಕಳೆದ ಅ.5 ರಂದು ದೆಹಲಿಯ ಹೈಕೋರ್ಟ್ ಸಿಮಿ ಸಂಘಟನೆಯ ನಿಷೇಧ ಹೇರುವಂತ ಬಲವಾದ ಸಾಕ್ಷ್ಯಧಾರಗಳನ್ನು ಒದಗಿಸುವಲ್ಲಿ ಕೇಂದ್ರ ವಿಫಲವಾಗಿದ್ದು, ಸಿಮಿ ಸಂಘಟನೆ ಮೇಲೆ ಗುರುತರವಾದ ಅಪವಾದ ಸಾಬೀತಾಗದ ಹಿನ್ನೆಲೆಯಲ್ಲಿ ನಿಷೇಧವನ್ನು ತೆರೆವುಗೊಳಿಸಿ ಆದೇಶ ನೀಡಿತ್ತು. ನ್ಯಾಯಾಮೂರ್ತಿಗಳಾದ ಗೀತಾ ಮಿತ್ತಲ್ ಈ ಆದೇಶವನ್ನು ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಸುಪ್ರಿಂಕೋರ್ಟ್ ಗೆ ಪ್ರಕರಣವನ್ನು ದಾಖಲಿಸಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಯಾವುದೇ ಅಂತಿಮ ತೀರ್ಮಾನಕ್ಕೆ ಬರದೇ, ವಾದ ವಿವಾದವನನ್ನು ಆಲಿಸುವ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಿಮಿ ಸಂಘಟನೆ ದೇಶದಲ್ಲಿ ನಡೆದಿರುವ ಎರಡು ವಿಧ್ವಂಸಕ ಕೃತ್ಯಗಳಲ್ಲಿ ಬಾಗಿಯಾಗಿದೆ. ಇದರಿಂದ ಅಪಾರ ಜೀವ ಹಾನಿಯ ಜತೆಗೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ 8ನೇ ಫೆಬ್ರವರಿ 2008ರಂದು ದೆಹಲಿ ಹೈಕೋರ್ಟ್ ಗೆ ಕೇಂದ್ರ ಸರ್ಕಾರವು ಪ್ರಕರಣವನ್ನು ದಾಖಲಿಸಿತ್ತು. ಕಳೆದ ಅ.5 ರಂದು ಹೈಕೋರ್ಟ್ ನಿಷೇಧ ಹಿಂತೆಗೆದುಕೊಂಡು ಆದೇಶ ಹೊರಡಿಸಿತ್ತು. ಸುಪ್ರಿಂಕೋರ್ಟ್ ನಲ್ಲಿ ಪ್ರಕರಣ ದಾಖಲಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ಸಿಮಿ ಮೇಲಿನ ನಿಷೇಧ ಮುಂದುವರಿಸಿ: ಸುಪ್ರೀಂಕೋರ್ಟ್
ಸಿಮಿ ನಿಷೇಧ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X