ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಯೋಧ ಕರ್ನಲ್ ಥಾಮಸ್ ಗೆ ಅಂತಿಮ ನಮನ

By Staff
|
Google Oneindia Kannada News

Nation pays homage to Col. Jojan Thomasಬೆಂಗಳೂರು, ಆ. 25 : ಕುಪ್ವಾರಾದಲ್ಲಿ ಆಗಸ್ಟ್ 22 ರಂದು ನಡೆದ ಗುಂಡಿನ ಚಕಮಕಿಯಲ್ಲಿ ಪಾಕ್ ನ 6 ಹತ್ಯೆಗೈದು, ದೇಶಕ್ಕಾಗಿ ಪ್ರಾಣತೆತ್ತ ವೀರಯೋಧ ಕರ್ನಲ್ ಥಾಮಸ್ (43)ಅವರ ಅಂತ್ಯಕ್ರಿಯೆಯನ್ನು ಇಂದು ಸಕಲ ಮಿಲಿಟರಿ ಗೌರವದೊಂದಿಗೆ ನೆರವೇರಿಸಲಾಯಿತು.45 ನೇ ರಾಷ್ಟ್ರೀಯ ರೈಫಲ್ಸ್ ನ ಮುಖ್ಯಸ್ಥರಾಗಿದ್ದ ಥಾಮಸ್ ಶುಕ್ರವಾರ, ಉಗ್ರರನ್ನು ಸದೆಬಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ನಗರದ ದೊಮ್ಮಲೂರಿನ ಚರ್ಚ್ ನಲ್ಲಿ ಕ್ರೈಸ್ತ್ರರ ಅಂತಿಮ ಸಂಸ್ಕಾರ ವಿಧಿವಿಧಾನಗಳ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಹೊಸೂರು ರಸ್ತೆಯಲ್ಲಿರುವ ಸೈನಿಕರ ಚಿತಾಗಾರದಲ್ಲಿ ಮಿಲಿಟರಿ ಗೌರವಾದರಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು. ಶನಿವಾರ ರಾತ್ರಿ ಕರ್ನಲ್ ಜೆಜೆ ಥಾಮಸ್ ಅವರ ಪಾರ್ಥೀವ ಶರೀರವನ್ನು ನಗರದ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ವಿಶೇಷ ವಿಮಾನ ನಿಲ್ದಾಣದ ಮೂಲಕ ತರಲಾಯಿತು. ಕಮಾಂಡ್ ಆಸ್ಪತ್ರೆಯಲ್ಲಿ ಇರಿಸಿ, ನಂತರ ಕುಟುಂಬದವರ ವಶಕ್ಕೆ ನೀಡಲಾಗಿತ್ತು.

ವೀರ ಯೋಧ:
'ವೈರಿಗಳು, ನನ್ನ ರೆಜಿಮೆಂಟ್ ನ ಒಬ್ಬ ಸೈನಿಕನನ್ನು ಮುಟ್ಟುವ(ಸಾಯಿಸುವ) ಮುಂಚೆ, ನನ್ನ ಹೆಣದ ಮೇಲೆ ನಡೆದುಕೊಂಡು ಹೋಗಬೇಕು' ಎಂದು ವೀರವಾಣಿಯನ್ನು ನುಡಿಯುತ್ತಿದ್ದರು ಎಂದು ಥಾಮಸ್ ಅವರ ಗೆಳೆಯರು ನೆನೆಯುತ್ತಾರೆ. ಕರ್ನಲ್ ಅವರು ಪತ್ನಿಮ್, ಮಗಳು ಮೇಘನಾ, ಮಗ ಫಿಲೇಮನ್ ಅವರನ್ನು ಅಗಲಿದ್ದಾರೆ. 'ನಾನು ಈ ಬಾರಿ ಉಗ್ರರನ್ನು ಸೆರೆ ಹಿಡಿಯುತ್ತೇನೆ. ಅವರ ಹುಟ್ಟಡಗಿಸುವವರೆಗೆ ಬಂದೂಕಿನ ನಳಿಕೆಗೆ ವಿಶ್ರಾಂತಿ ನೀಡುವುದಿಲ್ಲ ' ಎಂದು ಕೊನೆಯ ಬಾರಿಗೆ ಸಂದೇಶ ನೀಡಿದ್ದರು ಎಂದು ಮಗಳು ಮೇಘನಾ ಹೇಳುತ್ತಾರೆ.

ಅವನೊಬ್ಬ ವೀರಯೋಧ, ಒಂದು ವರ್ಷ ನಾನು ಆತನೊಡನೆ ಒಂದೇ ಟೆಂಟ್ ನಲ್ಲಿದ್ದೆ.ಉತ್ತಮ ನಾಯಕನಾಗಿದ್ದ, ಸಿಯಾಚಿನ್ ನಲ್ಲಿ ಆಪರೇಷನ್ ಪರಾಕ್ರಮ್ ನಲ್ಲಿದ್ದ ಯೋಧರಿಗೆ ಥಾಮಸ್ ಸದಾ ಸ್ಫೂರ್ತಿಯಾಗಿದ್ದರು ಎಂದು ಥಾಮಸ್ ಅವರ ಸಹ ಸೈನಿಕ ಮೇಜರ್ ಸಂಧು ಹೆಮ್ಮೆಯಿಂದ ಹೇಳಿದರು.

1986 ರಲ್ಲಿ ಸೇನೆ ಸೇರಿದ ಥಾಮಸ್ ಉತ್ತಮ ಪೈಲಟ್ ಕೂಡ ಆಗಿದ್ದರು. ಕಾಶ್ಮೀರಕ್ಕೆ ತೆರಳುವ ಮುನ್ನ ಬೆಂಗಳೂರಿನ ಸೇನಾ ನೆಲೆ (ಎಎಸ್ ಸಿ)ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಥಾಮಸ್ ಅವರ ಒಬ್ಬ ಸೋದರ ನೌಕಾ ದಳ ದಲ್ಲಿ ಹಾಗೂಮತ್ತೊಬ್ಬ ಸೇನೆಯಲ್ಲಿ ಇರುವುದು ವಿಶೇಷ.ಥಾಮಸ್ ಅವರ ಮಗ ಫಿಲೇಮನ್ ಕೂಡ ಫಿಲಿಫೈನ್ಸ್ ನಲ್ಲಿ ಪೈಲಟ್ ತರಬೇತಿ ಪಡೆಯುತ್ತಿದ್ದಾರೆ. ಕಳೆದ ಐದು ವರ್ಷದಿಂದ ಥಾಮಸ್ ಅವರ ಕುಟುಂಬ ನಗರದಲ್ಲಿ ನೆಲೆಸಿದೆ.

ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ , ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭಾನುವಾರ ನಾಗಾ ಟಾಕೀಸ್ ಬಳಿಯ ಕರ್ನಲ್ ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X