ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.3 ರಂದು ಲಂಡನ್ ಗೆ ಮಲ್ಯರ ಕಿಂಗ್ ಫಿಷರ್ ವಿಮಾನ

By Staff
|
Google Oneindia Kannada News

ಬೆಂಗಳೂರು, ಆ. 25 : ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ನ ಪ್ರಥಮ ಅಂತಾರಾಷ್ಟ್ರೀಯ ವಿಮಾನ ಯಾನ ಸೆ. 3 ರಂದು ನಗರದಿಂದ ಲಂಡನ್ ಗೆ ಹಾರುವ ಮೂಲಕ ಪ್ರಾರಂಭವಾಗಲಿದೆ.

ಬೆಂಗಳೂರು ಹಾಗೂ ಲಂಡನ್ ವಿಮಾನಯಾನ ಪ್ರತಿ ನಿತ್ಯ ಇರುತ್ತದೆ. ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಬೆಳಗ್ಗೆ 8:40 ಕ್ಕೆ ಹೊರಟ ವಿಮಾನ ಲಂಡನ್ ನ ಹಿಥ್ರೂ ವಿಮಾನ ನಿಲ್ದಾಣವನ್ನು ರಾತ್ರಿ 2.50 (ಸ್ಥಳೀಯ ಕಾಲಮಾನ)ಕ್ಕೆ ತಲುಪಲಿದೆ. ಲಂಡನ್ ನಿಂದ ರಾತ್ರಿ 10:05 ಕ್ಕೆ ಹೊರಟ ವಿಮಾನ ಮರುದಿನ ಮಧ್ಯಾಹ್ನ 12:35 ಕ್ಕೆ ತಲುಪಲಿದೆ ಎಂದು ಕಿಂಗ್ ಫಿಷರ್ ಏರ್ ಲೈನ್ಸ್ ನ ವಕ್ತಾರರು ತಿಳಿಸಿದರು.

A 330-220 ಏರ್ ಬಸ್ ಪ್ರಥಮ ವಿಮಾನಯಾನಕ್ಕೆ ಸಜ್ಜಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಐಷಾರಾಮಿ ಸೌಲಭ್ಯಗಳೊಂದಿಗೆ ಹೊಸ ಬಗೆಯ ಸೇವೆ ನೀಡಲು ಕಿಂಗ್ ಫಿಷರ್ ತಯಾರಿದೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X