ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನ : ಶಾಸಕರಿಗೆ ಹೈಕೋರ್ಟ್ 'ವೀಸಾ'

By Staff
|
Google Oneindia Kannada News

ಬೆಂಗಳೂರು, ಆ. 25 : ಅಮೆರಿಕದ ಶಿಕಾಗೋದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನಕ್ಕೆ ಮುಖ್ಯಮಂತ್ರಿ, ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ವಂತ ವೆಚ್ಚದಲ್ಲಿ ತೆರಳಲು ರಾಜ್ಯ ಉಚ್ಚ ನ್ಯಾಯಾಲಯ ಅನುಮತಿ ನೀಡಿದ್ದು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ಶಾಸಕರ ಅಮೆರಿಕ ಪ್ರವಾಸಕ್ಕೆ ಸಾರ್ವಜನಿಕ ಹಣ ದುರುಪಯೋಗವಾಗುತ್ತಿದೆಯೆಂದು ಆರೋಪಿಸಿ ನ್ಯಾಯವಾದಿ ಎಸ್. ವಾಸುದೇವ್ ಎಂಬ ವಕೀಲರು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಸ್ವಂತ ಹಣದಲ್ಲಿ ಶಾಸಕರು ಅಮೆರಿಕಕ್ಕೆ ತೆರಳುತ್ತಿರುವುದಾಗಿ ಯಡಿಯೂರಪ್ಪ ಬಹಿರಂಗ ಹೇಳಿಕೆ ನೀಡಿದ್ದರೂ ಈ ಕುರಿತಾಗಿ ನ್ಯಾಯಾಲಯ ವಿವರ ನೀಡಬೇಕೆಂದು ಮುಖ್ಯಮಂತ್ರಿಯನ್ನು ನ್ಯಾಯಾಲಯ ತಾಕೀತುಪಡಿಸಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರು, ಸಂಬಂಧಿಸಿದ ಅಧಿಕಾರಿ ವರ್ಗ ಹಾಗೂ ಹಿರಿಯ ಕಲಾವಿದರು ಸ್ವಂತ ವೆಚ್ಚದಲ್ಲಿ ಅಕ್ಕ ಸಮ್ಮೇಳನಕ್ಕೆ ತೆರಳಲಿದ್ದಾರೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ನಂತರ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ತೀವ್ರ ಕಗ್ಗಂಟಾಗಿದ್ದ 'ಅಕ್ಕ' ಸಮ್ಮೇಳನಕ್ಕೆ ಶಾಸಕರು ತೆರಳಲು ಶಾಸಕರಿಗೆ ಇದ್ದ ಕೊನೆಯ ಅಡೆತಡೆಯೂ ಉರುಳಿಬಿದ್ದಂತಾಗಿದೆ.

ಅಮೆರಿಕದ ಶಿಕಾಗೋದಲ್ಲಿ ಆಗಸ್ಟ್ 29ರಿಂದ ಮೂರು ದಿನಗಳ ಕಾಲ 5ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಯೊಬ್ಬರು ಅಕ್ಕ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಭಾಗವಹಿಸುತ್ತಿರುವುದು ವಿಶೇಷ. ಯಡಿಯೂರಪ್ಪ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದು, ಅವರಿಗೆ ಮಾತ್ರ ಅಧಿಕೃತವಾಗಿ ಆಹ್ವಾನಿಸಲಾಗಿದೆ. ಉಳಿದಂತೆ ಯಾವ ಶಾಸಕರಿಗೆ, ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿಲ್ಲ. ಸರ್ಕಾರಿ ವೆಚ್ಚದಲ್ಲಿ ಮುಖ್ಯಮಂತ್ರಿ ನಿಯೋಗದಲ್ಲಿ ನೂರಾರು ಜನರು ಅಕ್ಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ ಎನ್ನುವ ಅಸಮಾಧಾನ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಉಂಟಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಶಿಕಾಗೋ ಸಮ್ಮೇಳನಕ್ಕೆ ಅಕ್ಕ ಪದಾಧಿಕಾರಿಗಳ ವೀಳ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X