ಅನೈತಿಕ ಸಂಬಂಧ ಪತ್ನಿ ಪ್ರಿಯಕರನ ಕೊಲೆ
ರಾಯಭಾಗ್/ಬೆಳಗಾವಿ, ಆ. 25 : ಅನೈತಿಕ ಸಂಬಂಧದಿಂದ ರೊಚ್ಚಿಗೆದ್ದ ಪತಿ ಮಹಾಶಯ ಪತ್ನಿ ಹಾಗೂ ಪ್ರಿಯಕರನನ್ನು ಕೊಲೆ ಮಾಡಿ ನೇರವಾಗಿ ಪೊಲೀಸರಿಗೆ ಶರಣಾಗಿರುವ ಘಟನೆ ರಾಯಭಾಗ್ ತಾಲ್ಲೂಕು ಶಾಹೀದಕೋಡಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಯಮುನವ್ವ ಮತ್ತು ಆಕೆಯ ಪ್ರಿಯತಮ ಸಂಜು ಮೃತಪಟ್ಟವರಾಗಿದ್ದಾರೆ. ಕರಿಯಪ್ಪ ಎಂಬಾತ ಪತ್ನಿ ಮತ್ತು ಪ್ರಿಯತನನ್ನು ಕೊಲೆಗೈದಿರುವ ಭೂಪ. ಈ ಮೂವರು ರಾಯಭಾಗ್ ತಾಲ್ಲೂಕು ಶಾಹೀದಕೋಡಿ ಗ್ರಾಮದವರು. ಪತ್ನಿಯಮುನವ್ವಳ ಅನೈತಿಕ ಸಂಬಂಧದಿಂದ ರೊಚ್ಚಿಗೆದ್ದ ಪತಿ ಕರಿಯಪ್ಪ ತನ್ನ ಪತ್ನಿ ಮತ್ತು ಪ್ರಿಯಕರ ಸಂಜು ಎಂಬಾತನನ್ನು ಸೋಮವಾರ ನಸುಕಿನ ಜಾವ ಗ್ರಾಮದ ತೋಟ ಮನೆಯೊಂದರಲ್ಲಿ ಕೊಲೆ ಮಾಡಿ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಪತ್ನಿಯ ಅನೈಂತಿಕ ಸಂಬಂಧದಿಂದ ಈ ಕೃತ್ಯ ಎಸಗಿರುವುದಾಗಿ ಕರಿಯಪ್ಪ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ರಾಯಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
