ಸೆ.2 ರಂದು ದೆಹಲಿಗೆ ಸರ್ವ ಪಕ್ಷಗಳ ನಿಯೋಗ : ಬೊಮ್ಮಾಯಿ
ಬೆಂಗಳೂರು, ಆ. 25 : ರಾಜ್ಯ ಸರ್ಕಾರಕ್ಕೆ ತೀವ್ರ ಸಮಸ್ಯೆಯಾಗಿ ಕಾಡುತ್ತಿರುವ ವಿವಾದಿತ ಹೊಗೇನಕಲ್ ಜಲಾಶಯ ಹಾಗೂ ಕಳಸಾ ಬಂಡೂರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸೆಪ್ಟಂಬರ್ 2 ರಂದು ಸರ್ವ ಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಸೇರಿದಂತೆ ರಾಜ್ಯದ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕಳಸಾ ಬಂಡೂರಿ ಯೋಜನೆಯಲ್ಲಿ ಗೋವಾ ಸರ್ಕಾರ ಅನಗತ್ಯವಾಗಿ ಮೂಗು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಯೋಜನೆಗೆ ಯಾವುದೇ ವಿಳಂಬ ಬಾರದಂತೆ ಮುನ್ನೆಡೆಸಲು ನ್ಯಾಯಾಧೀಕರಣವನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಗೋವಾ ಸರ್ಕಾರ ವಿನಾಕಾರಣ ಯೋಜನೆಗೆ ಅಡ್ಡಿಪಡಿಸುತ್ತದೆ. ಕೇಂದ್ರದ ಜಲ ಆಯೋಗವೇ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿದೆ ಎಂದ ಅವರು, ವಿವಾದದಿಂದಾಗಿ ವಾರ್ಷಿಕ 200 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿದೆ. ಅದರಲ್ಲಿ 40 ಟಿಎಂಸಿ ರಾಜ್ಯಕ್ಕೆ ಸೇರಬೇಕಾಗಿದೆ ಎಂದರು. ಆದ್ದರಿಂದ ಸುಪ್ರಿಂಕೋರ್ಟ್ ನಲ್ಲಿರುವ ಅರ್ಜಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಸಚಿವ ಬೊಮ್ಮಾಯಿ ಆಗ್ರಹಿಸಿದರು. ಕಾವೇರಿ ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ ಗೆ ಸಲ್ಲಿಸಿರುವ ವಿಶೇಷ ಅರ್ಜಿ ನವೆಂಬರ್ ನಲ್ಲಿ ವಿಚಾರಣೆಗೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಹೊಗೇನಕಲ್ ತಮಿಳುನಾಡಿನಅವಿಭಾಜ್ಯ ಅಂಗ :ತ್ರಿಪಾಠಿ
ಹೊಗೆ ಹಗೆ ನಿಲ್ಲಿಸಲು ದೆಹಲಿ ತನಕ ದೂರು


Click it and Unblock the Notifications
