ಕಾಶ್ಮೀರ ಮತ್ತೆ ಉದ್ವಿಗ್ನ : ನಿಷೇಧಾಜ್ಞೆ ಮುಂದುವರಿಕೆ

ಜಮ್ಮು/ ಕಾಶ್ಮೀರ, ಆ. 25 : ಕಳೆದ ಎರಡು ದಿನಗಳಿಂದ ಶಾಂತಿ ಕಾಯ್ದುಕೊಂಡಿದ್ದು ಜಮ್ಮು ನಗರ ಇಂದು ಮತ್ತೆ ಅಕ್ಷರಶಃ ಬೆಂಕಿ ಜ್ವಾಲೆಯಾಗುವ ವಾತಾವರಣ ಕಂಡು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಈ ಮಧ್ಯೆ ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ರಚಿಸಿರುವ ರಾಜ್ಯಪಾಲರನ್ನು ಒಳಗೊಂಡ ಸಮಿತಿ ಜತೆ ಮಾತುಕತೆ ವಿಫಲವಾದರೆ, ಆ. 31ಕ್ಕೆ ಬಂದ್ ಆಚರಿಸಲಾಗುವುದು ಎಂದುಅಮರನಾಥ್ ಸಂಘರ್ಷ ಸಮಿತಿ ಮೂಲಗಳು ತಿಳಿಸಿವೆ.

ಅಮರನಾಥ್ ಸಂಘರ್ಷ ಸಮಿತಿ ಮತ್ತು ಸರ್ಕಾರದ ಸಮಿತಿಯ ಮಧ್ಯೆ ನಡೆಯುತ್ತಿರುವ ಮಾತುಕತೆ ಫಲಪ್ರದವಾಗುವ ಲಕ್ಷಣಗಳು ಗೋಚರಿಸತೊಡಗಿವೆ. ಅಮರನಾಥ್ ಸಂಘರ್ಷ ಸಮಿತಿ ಪ್ರತಿಭಟನೆಯನ್ನು ತೀವ್ರಗೊಳಿಸಿದ ಹಿನ್ನಲೆಯಲ್ಲಿ ಅಮರನಾಥ್ ಯಾತ್ರಾತ್ರಿಗಳಿಗೆ ಪ್ರತಿ ವರ್ಷ ಶ್ರಾವಣ ಮಾಸದದಲ್ಲಿ ತಾತ್ಕಾಲಿಕವಾಗಿ ಭೂಮಿಯನ್ನು ನೀಡುವ ಕುರಿತು ಮಾತುಕತೆ ನಡೆದಿದೆ. ಯಾತ್ರಾತ್ರಿಗಳಿಗೆ ಎಲ್ಲ ಅನುಕೂಲ ಮಾಡಿಕೊಡುವ ಭರವಸೆಯನ್ನು ಸಮಿತಿ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮುವಿನ ಫೂಂಚ್ ಪ್ರದೇಶವನ್ನು ಬಿಟ್ಟು ಉಳಿದ ಪ್ರದೇಶದಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಹಿಂದಕ್ಕೆ ಪಡೆಯಲಾಗಿದೆ.

ಇನ್ನೊಂದಡೆ ಕಾಶ್ಮೀರ ಕಣಿವೆಯ 10 ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಪರಿಸ್ಥಿತಿ ಹದಗೆಟ್ಟಿದ್ದು, ಬೂದಿ ಮುಚ್ಚಿದ ಕೆಂಡದಂತಾಗಿದೆ. ಈ ಮಧ್ಯೆ ಪ್ರತಿಭಟನೆ ನಡೆಸುತ್ತಿದ್ದ ಕಾಶ್ಮೀರಿ ಹುರಿಯತ್ ಮುಖಂಡರಾದ ಮೀರ್ ವಾಜ್ ಉಮರ್ ಫರೂಕ್ ಹಾಗೂ ಜಮಾತ್-ಇ-ಇಸ್ಲಾಮಿ ಮುಖಂಡರನ್ನು ಬಂಧಿಸಲಾಗಿದ್ದು, ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಸಹಜ ಸ್ಥಿತಿಯತ್ತ ಜಮ್ಮು : ನಿಷೇಧಾಜ್ಞೆ ಹಿಂದಕ್ಕೆ
ಅಮರನಾಥ ವಿವಾದ ಮುಕ್ತಿಗೆ ಭದ್ರತಾ ಸಲಹೆಗಾರ ಭೇಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+