ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಗರ-ಮುಜಫರಬಾದ್ ಬಸ್ ಸಂಚಾರ ಆರಂಭ

By Staff
|
Google Oneindia Kannada News

ಶ್ರೀನಗರ, ಆ. 21 : ಭಾರತ-ಪಾಕಿಸ್ತಾನ ಉಭಯ ದೇಶಗಳ ಬಾಂಧವ್ಯ ಬೆಸೆಯುವುದರ ಜತೆಗೆ ಶಾಂತಿ ಸೌಹಾರ್ಧವನ್ನು ಕಾಪಾಡುವ ನಿಟ್ಟಿನಲ್ಲಿ ಪಾಕ್ ಆಕ್ರಮಿತ ಮುಜಫರಬಾದ್ ನಗರಕ್ಕೆ ಆರಂಭಿಸಲಾಗಿರುವ ಮುಜಾಫರಬಾದ್-ಶ್ರೀನಗರ ಬಸ್ ಸಂಚಾರಕ್ಕೆ ಗುರುವಾರ ಮತ್ತೆ ಹಸಿರು ನಿಶಾನೆ ತೋರಿಸಲಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ಅಮರನಾಥ ದೇವಾಲಯದ ಭೂವಿವಾದದ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ತಾತ್ಕಾಲಿಕವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪೂರ್ವ ನಿಗದಿಯಂತೆ ಆ. 28 ರಂದು ಶ್ರೀನಗರ-ಮುಜಫರಬಾದ್ ಬಸ್ ಸಂಚಾರ ಆರಂಭವಾಗಲಿದೆ ಎಂದು ಶ್ರೀನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಎಲ್.ಮನವಲನ್ ತಿಳಿಸಿದ್ದಾರೆ.

2005ರಲ್ಲಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಪಾಕಿಸ್ತಾನದೊಂದಿಗೆ ಸ್ನೇಹ ಸೌಹಾರ್ಧತೆಯ ಕಾಪಾಡುವ ದೃಷ್ಟಿಯಿಂದ ಪಾಕ್ ಆಕ್ರಮಿತ ಮುಜಫರಬಾದ್ ಗೆ ಶ್ರೀನಗರದಿಂದ ಬಸ್ ಸಂಚಾರ ಆರಂಭಿಸಿದ್ದರು. ಆದರೆ ಅಮರನಾಥ ಭೂವಿವಾದದ ಹಿನ್ನೆಲೆಯಲ್ಲಿ ಅಮರನಾಥ್ ಸಂಘರ್ಷ ಸಮಿತಿಯವರು ಪ್ರತಿಭಟನೆ ತೀವ್ರಗೊಳಿಸಿದ್ದರಿಂದ ರಾಜ್ಯ ಅನೇಕ ಭಾಗಗಳಲ್ಲಿ ನಿಷೇಧಾಜ್ಞೆ, ಲಾಠಿ ಜಾರ್ಜ್ ಮತ್ತು ಹಿಂಸಾಚಾರ ಮುಂದುವರೆದಿತ್ತು. ಅದರಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಿಗದಿಯಂತೆ ತಿಂಗಳಿಗೆ ಎರಡು ಬಾರಿ ಮುಜಫರಬಾದ್-ಶ್ರೀನಗರ ಬಸ್ ಸಂಚರಿಸಲಿದೆ.

(ದಟ್ಸ್ ಕನ್ನಡ ವಾರ್ತೆ)
ಅಮರನಾಥ ವಿವಾದ ಮುಕ್ತಿಗೆ ಭದ್ರತಾ ಸಲಹೆಗಾರ ಭೇಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X