ಪರಮಾಣು ಒಪ್ಪಂದದ ಅಗ್ನಿ ಪರೀಕ್ಷೆ ಇಂದು
ವಿಯನ್ನಾ, ಆ. 21 : ತೀವ್ರ ಕುತೂಹಲ ಕೆರಳಿಸಿರುವ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವು ಮಹತ್ವದ ಘಟ್ಟ ಬಂದು ತಲುಪಿದೆ. ಪರಮಾಣು ಸರಬರಾಜು ಸದಸ್ಯ ರಾಷ್ಟ್ರಗಳ (ಎನ್ಎಸ್ ಜಿ) ಉನ್ನತ ಮಟ್ಟದ ಸಭೆ ಇಂದು ಆರಂಭವಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಭಾರತದ ಪರಮಾಣು ಹೊಂದಿರುವ ರಾಷ್ಟ್ರದ ಗೌರವಕ್ಕೆ ಪಾತ್ರವಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಭಾರತ ಮತ್ತು ಅಮೆರಿಕ ದೇಶಗಳು ಒಪ್ಪಂದಕ್ಕೆ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಪಡೆಯಲು ಹರಸಾಹಸ ನಡೆಸಿವೆ. ಎನ್ಎಸ್ ಜಿ ಸದಸ್ಯ ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಜರ್ಮನಿ ಮೇಲೆ ಈ ಎರಡು ದೇಶಗಳ ನಾಯಕರು ಭಾರಿ ಒತ್ತಡ ಹೇರಿದ್ದಾರೆ. ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಶಿವಶಂಕರ ಮೆನನ್ ನೇತೃತ್ವದ ನಿಯೋಗ ಎರಡು ಮುಂಚಿತವಾಗಿ ವಿಯನ್ನಾಗೆ ತೆರಳಿದ್ದು, ತೀವ್ರ ಲಾಬಿ ನಡೆಸಿದ್ದಾರೆ. ಶತಾಯಗತಾಯ ಪರಮಾಣು ಒಪ್ಪಂದಕ್ಕೆ ಎನ್ಎಸ್ ಜಿ ರಾಷ್ಟ್ರಗಳಿಂದ ಸಹಿ ಹಾಕಿಸಿಕೊಳ್ಳುವ ಮೂಲಕ ಪರಮಾಣು ರಾಷ್ಟ್ರವಾಗುವುದರ ಜತೆಗೆ ಇಂಧನ. ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸುವ ಇರಾದೆಯನ್ನು ಹೊಂದಿದೆ.
ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಸೇರಿದಂತೆ ಶ್ಯಾಮ್ ಶರಣ್, ಡಿ.ಪಿ.ವೆಂಕಟೇಶ್ ಅವರುಗಳು ಎನ್ಎಸ್ ಜಿ ರಾಷ್ಟ್ರಗಳಲ್ಲಿ ಹೆಚ್ಚು ಪ್ರಭಾವಿ ಎನಿಸಿರುವ ಜರ್ಮನಿ, ಹಂಗರಿ ಹಾಗೂ ದಕ್ಷಿಣ ಆಫ್ರಿಕಾ ದೇಶಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಅಮೆರಿಕ ದೇಶವೂ ಎನ್ಎಸ್ ಜಿ ಮೇಲೆ ಸಾಕಷ್ಟು ಒತ್ತಡ ಹೇರಿದೆ. ಇಂದು ಸಂಜೆಯೊಳಗೆ ಭಾರತ ಅಮೆರಿಕ ಪರಮಾಣು ಒಪ್ಪಂದದ ಮುಂದಿನ ದಾರಿ ಸ್ಪಷ್ಟವಾಗಲಿದೆ.
(ದಟ್ಸ್ ಕನ್ನಡ ವಾರ್ತೆ)
ಅಣು ಒಪ್ಪಂದ : ಎನ್ಎಸ್ ಜಿ ಅಂಗಳದಲ್ಲಿ ಚೆಂಡು


Click it and Unblock the Notifications
