ಮಾತೆ ಮಹಾದೇವಿ ವಿರುದ್ಧ ಚಿಮೂ ಆಕ್ರೋಶ
ಬೆಂಗಳೂರು,ಆ.21: ವಚನಕಾರ ಬಸವಣ್ಣನವರ ವಚನಗಳು ಹಾಗೂ ಅಂಕಿತವನ್ನು ತಿರುಚುವ ಮೂಲಕ ಮಾತೆ ಮಹಾದೇವಿ ತಮ್ಮ ವಿಕಲ ಮನಸ್ಸನ್ನು ತೋರಿಸಿದ್ದಾರೆ ಎಂದು ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಕಟುವಾಗಿ ಟೀಕಿಸಿದ್ದಾರೆ.
ಬಸವಣ್ಣನವರ ವಚನ ಹಾಗೂ ಅಂಕಿತವನ್ನು ಬದಲಿಸುವ ಮೂಲಕ ಮಾತೆ ಮಹಾದೇವಿ ಇತಿಹಾಸ ಹಾಗೂ ಸಾಹಿತ್ಯಕ್ಕೆ ಘೋರ ಅನ್ಯಾಯ,ಅಪಮಾನ ಎಸಗಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಕಾಲ ಸನ್ನಿಹಿತವಾಗಿದೆ ಎಂದು ಚಿಮೂ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ್ ಅವರ ಸಿದ್ದರಾಮರ ನಿಜವಚನ ಪುಸ್ತಕದಲ್ಲಿ ವಸ್ತುನಿಷ್ಠ ಸಂಶೋಧನಾ ಮನೋಭಾವ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಅಲ್ಲಮಪ್ರಭು,ಬಸವಣ್ಣ,ಸಿದ್ದರಾಮ,ಅಕ್ಕಮಹಾದೇವಿ ಇವರೆಲ್ಲ ಸಮಕಾಲೀನ ವಚನಕಾರರಲ್ಲ ಎಂದು ಬಸವರಾಜ್ ಹೇಳಿ ಇತಿಹಾಸಕ್ಕೆ ಅನ್ಯಾಯ ಮಾಡಿದಂತಾಗಿದೆ. ಇಂತಹ ಕೃತ್ಯಗಳನ್ನು ಇಂದು ಅತ್ಯಾವಶ್ಯಕವಾಗಿ ತಡೆಯಬೇಕಾಗಿದೆ ಎಂದು ಚಿಮೂ ಕಿಡಿ ಕಾರಿದರು.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
