ಪಕ್ಷ ತೊರೆದವರಿಗೆ ಕುಮಾರಸ್ವಾಮಿ ಖುದ್ದು ಆಹ್ವಾನ

ಬೆಂಗಳೂರು,ಆ.21: ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಜನತಾಪರಿವಾರ ತೊರೆದ ಯಾರೇ ಆಗಲಿ ಮತ್ತೆ ಪಕ್ಷಕ್ಕೆ ಹಿಂತಿರುಗಿದರೆ ಅವರನ್ನು ಖುದ್ದು ತಾವೇ ಸ್ವಾಗತಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜೆಡಿಎಸ್ ತೊರೆದ ಪಿ.ಜಿ.ಆರ್.ಸಿಂಧ್ಯಾ,ಎಂ.ಪಿ.ಪ್ರಕಾಶ್,ಮಹಿಮಾ ಪಟೇಲ್,ಸಿದ್ದರಾಮಯ್ಯ ಮತ್ತಿನ್ಯಾರೇ ಆಗಲಿ ಪಕ್ಷಕ್ಕೆ ಮರಳಿದರೆ ಅವರನ್ನು ವೈಯಕ್ತಿಕವಾಗಿ ಹಾಗೂ ಪಕ್ಷದ ಪರವಾಗಿ ಸ್ವಾಗತಿಸುತ್ತೇನೆ. ಈ ಕುರಿತು ಜೆಡಿಎಸ್‌ನ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಕೆಲವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಗತ್ಯ ಬಿದ್ದರೆ ತಾವೂ ಮಾತುಕತೆ ನಡೆಸುತ್ತೇವೆ ಎಂದರು.

ಉಪಚುನಾವಣೆಗೆ ಅಭ್ಯರ್ಥಿಗಳನ್ನು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಒಂದು ವಾರದಲ್ಲಿ ಪ್ರಕಟಿಸುವುದಾಗಿ ಕುಮಾರಸ್ವಾಮಿ ತಿಳಿಸಿದರು. ಸೆ.23ಕ್ಕೆ ದೊಡ್ಡಬಳ್ಳಾಪುರ, ಸೆ.10ಕ್ಕೆ ಮಧುಗಿರಿ, ಸೆ.14ಕ್ಕೆ ತುರುವೇಕೆರೆಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ಎರಡನೇ ದಿನಕ್ಕೆ ಸಿದ್ದು ರಹಸ್ಯ ಸಭೆ
ಜೆಡಿಎಸ್ ಗೆ ಗುಡಬೈ ಹೇಳಿದ ಉಮೇಶ ಕತ್ತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+