ದೆಹಲಿ ವಿಮಾನ ನಿಲ್ದಾಣದಲ್ಲಿ ದಾಖಲೆಯ ರನ್ವೇ
ನವದೆಹಲಿ,ಆ.21: ದೇಶದಲ್ಲೇ ಅತಿ ಉದ್ದವಾದ ರನ್ವೇಯನ್ನು ದೆಹಲಿ ಅಂತಾರಾಷ್ಟೀಯ ವಿಮಾನ ನಿಲ್ದಾಣದಲ್ಲಿ(ಡಿಐಎಎಲ್) ಗುರುವಾರ ಉದ್ಘಾಟಿಸಲಾಯಿತು. ಏರ್ ಇಂಡಿಯಾ ವಿಮಾನ ರನ್ವೇಯಲ್ಲಿ ಸಂಚರಿಸುತ್ತಿದ್ದರೆ ಅಗ್ನಿಶಾಮಕ ವಾಹನಗಳು ಕಾರಂಜಿಯಂತೆ ನೀರನ್ನು ಚಿಮ್ಮುತ್ತಾ ಸ್ವಾಗತಿಸಿದ ದೃಶ್ಯ ನಯನ ಮನೋಹರವಾಗಿತ್ತು.
ಈ ರನ್ವೇಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಲ್ಯಾಂಡಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು 50 ಮೀಟರ್ಗಿಂತಲೂ ಕಡಿಮೆ ಎತ್ತರದಿಂದ ವಿಮಾನಗಳು ಸುಲಭವಾಗಿ ಇಳಿಯಬಹುದು. 4.43 ಕಿ.ಮೀ ಉದ್ದವಿರುವ ಈ ರನ್ವೇ ಏಷ್ಯಾ ಖಂಡದಲ್ಲೇ ಅತಿದೊಡ್ಡದಾಗಿದೆ. 4.12 ಕಿ.ಮೀ ಉದ್ದವಿರುವ ಕೌಲಾಲಂಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ದವನ್ನು ಮೀರಿಸಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ 35 ರಿಂದ 40 ವಿಮಾನಗಳು ಈ ರನ್ವೇಯಲ್ಲಿ ಸಂಚರಿಸುತ್ತಿವೆ. ಹೊಸ ರನ್ವೇ ನಿರ್ಮಾಣವಾದ ಕಾರಣ ವಿಮಾನಗಳ ಸಂಚಾವೂ ದ್ವಿಗುಣಗೊಳಿಸಲಾಗಿದ್ದು ಒತ್ತಡದ ವೇಳೆಯಲ್ಲಿ 75 ವಿಮಾನಗಳು ಸಂಚರಿಸಲಿವೆ. ಇಲ್ಲಿನ ಎರಡು ಹಳೆಯ ರನ್ವೇಗಳ ಮೂಲಕ ದಿನಕ್ಕೆ 700 ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ಡಿಐಎಎಲ್ ಅಧಿಕಾರಿಗಳು ವಿವರ ನೀಡಿದರು.
(ಏಜೆನ್ಸೀಸ್)


Click it and Unblock the Notifications
