Get Updates
Get notified of breaking news, exclusive insights, and must-see stories!

ವಿಶ್ವರಂಗಭೂಮಿ ರಾಯಭಾರಿಯಾಗಿ ಕಾರ್ನಾಡ್

ನವದೆಹಲಿ, ಆ.19: ಖ್ಯಾತ ನಾಟಕಕಾರ ಹಾಗೂ ನಟ ಗಿರೀಶ್ ಕಾರ್ನಾಡ್ ಅವರು ಯುನೆಸ್ಕೊದ ಅಂತರಾಷ್ಟೀಯ ರಂಗಭೂಮಿ ಸಂಸ್ಥೆಗೆ ವಿಶ್ವ ರಂಗಭೂಮಿ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಪ್ಯಾರಿಸ್ ಮೂಲದ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ ಪ್ರಪಂಚದ 12 ಮಂದಿ ಖ್ಯಾತ ರಂಗಭೂಮಿ ಕಲಾವಿದರಿಗೆ ಈ ಗೌರವ ನೀಡಿದೆ. ಬ್ರಿಟನ್‌ನ ಪೀಟರ್ ಬ್ರೂಕ್,ಇಟಲಿಯ ಡೇರಿಯೊ ಫೊ,ಫ್ರಾನ್ಸ್‌ನ ಅರೈನೆ ನೌಕಿನ್,ಜರ್ಮನಿಯ ಪಿನಾ ಬಾಷ್ ಈ ಗೌರವಕ್ಕೆ ಪಾತ್ರರಾದ ಪ್ರಮುಖರು.

ಕಳೆದ 40 ವರ್ಷಗಳಿಂದ ಸಮಕಾಲೀನ ಭಾರತದ ಬಗ್ಗೆ ಬರೆದ ಕಾರ್ನಾಡರ ಹಲವಾರು ಪ್ರಸಿದ್ಧ ನಾಟಕಗಳು ಇತರೆ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಕಾರ್ನಾಡರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ(1972),ಪದ್ಮಶ್ರೀ(1974) ಹಾಗೂ ಪದ್ಮಭೂಷಣ್ (1992) ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+