• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಳಿಕೋಟಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ

By Staff
|

ಬಿಜಾಪುರ, ಆ. 18 : ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜಾಪುರ ಜಿಲ್ಲೆಯ ತಾಳಿಕೋಟಿಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಗುಜರಾತ್‌ನ ಪೊಲೀಸರು ಬಂಧಿಸಿ ಅಹ್ಮದಾಬಾದ್‌ಗೆ ಕರೆದ್ಯೊಯ್ದಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಅಗತ್ಯ ಸುಳಿವಿನ ಮೇರೆಗೆ ಆಗಸ್ಟ್ 14ರಂದು ಬೆಳಗಿನ ಜಾವ ನಗರಕ್ಕೆ ಆಗಮಿಸಿದ ರಾಜ್ಯ ಸಿಓಡಿ ಪೊಲೀಸರ ತಂಡ ಹಾಗೂ ಗುಜರಾತ್‌ನ ಪೊಲೀಸರು ರಹಸ್ಯ ಕಾರ್ಯಚರಣೆ ನಡೆಸಿ, ನಗರದಲ್ಲಿ ಬೀಡುಬಿಟ್ಟಿದ್ದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿ ಅಹ್ಮದಾಬಾದ್‌ಗೆ ಕರೆದುಕೊಂಡು ಹೋಗಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಸಿಮಿ ಸಂಘಟನೆಗೆ ಸೇರಿದ ಹಾಗೂ ಈ ಸಂಘಟನೆಗೆ ಸಹಕರಿಸುವ ವ್ಯಕ್ತಿಗಳು ಇದ್ದಾರೆ ಎನ್ನುವ ದಟ್ಟವಾದ ವದಂತಿಗಳು ಅನೇಕ ದಿನಗಳಿಂದ ಹರಡಿದ್ದವು. ಹಾಗೂ ಧಾರವಾಡದಲ್ಲಿ ಸಿಕ್ಕಿ ಬಿದ್ದಿರುವ ಶಂಕಿತ ಅಬ್ಧುಲ್ ಅಹ್ಮದ್ ಜತೆಗೆ ಈ ಇಬ್ಬರು ಸಂಪರ್ಕ ಹೊಂದಿದ್ದರು, ಅತನೊಂದಿಗೆ ಅನೇಕ ದಿನಗಳ ಕಾಲ ವಾಸವಿದ್ದರು ಎನ್ನಲಾಗಿದೆ. ಇವರಿಬ್ಬರು ಬಂದೂಕು ತರಬೇತಿಯನ್ನು ಕೂಡಾ ಪಡೆದಿದ್ದರು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಅಹ್ಮದಾಬಾದ್ ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಇವರ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಸಿಮಿ ಸಂಘಟನೆ ಇಲ್ಲಿ ಸಕ್ರಿಯವಾಗಿತ್ತು ಎಂದು ತಿಳಿದು ಬಂದಿದೆ. ಅದೇ ಸಂಪರ್ಕದ ಮೂಲಕ ಕೃತ್ಯ ಎಸಗಲಾಗುತ್ತಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ. ಕಳೆದ ತಿಂಗಳ ಅಹಮದಾಬಾದ್ ನಲ್ಲಿ ಸರಣಿ ಬಾಂಬ್ ಸ್ಫೋಟಗೊಂಡು 55ಕ್ಕೂ ಮಂದಿ ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಗಾಯಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ಜೈಪುರ ಸ್ಫೋಟಕ್ಕೆ ನಗರದ ವೈದ್ಯ ವಿದ್ಯಾರ್ಥಿ ನೆರವು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more