ತೆಲುಗು ನಟ ಚಿರಂಚೀವಿ ರಾಜಕೀಯ ಪ್ರವೇಶ

Chiranjeevi enters politicsಹೈದರಾಬಾದ್, ಆ. 18 : ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಚೀವಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದಾರೆ. ಭಾನುವಾರ ಈ ವಿಷಯವನ್ನು ಪ್ರಕಟಿಸಿದ ಚಿರಂಜೀವಿ ಕಳೆದ ಒಂದು ವರ್ಷದಿಂದ ಸುದ್ದಿಯಾಗಿ ಉಳಿದಿದ್ದ ಅವರ ರಾಜಕೀಯ ಪ್ರವೇಶಕ್ಕೆ ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಿದರು.

ಜ್ಯುಬಿಲಿ ಹಿಲ್ಸ್ ನಲ್ಲಿರುವ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷ ಸಾಮಾಜಿಕ ನ್ಯಾಯ ಮತ್ತು ಪರಿಕಲ್ಪನೆಯ ಜತೆಗೆ ಬಡವರ ನೀತಿ ಹೊಂದಿರುತ್ತದೆ ಎಂದರು. ದೇವಸ್ಥಾನಗಳ ಪಟ್ಟಣ ತಿರುಪತಿಯಲ್ಲಿ ಈ ತಿಂಗಳ 26 ರಂದು ಏರ್ಪಡಿಸಲಾಗಿರುವ ಸಾರ್ವಜನಿಕ ಸಮಾರಂಭದಲ್ಲಿ ಪಕ್ಷದ ಹೆಸರು ಧ್ವಜ ಮತ್ತು ಕಾರ್ಯಕ್ರಮಗಳನ್ನು ಘೋಷಿಸಲಾಗುವುದು ಎಂದು ಸ್ಪಷ್ಚಪಡಿಸಿದರು. ತಾವು ಮದರ್ ತೇರಸಾ ಅವರ ಅರಾಧಕರರಾಗಿರುವುದರಿಂದ ಅವರ ಜನ್ಮದಿನದಂದು ತಮ್ಮ ನೂತನ ಪಕ್ಷ ಸ್ಥಾಪಿಸುವ ನಿರ್ಧಾರವನ್ನು ಪ್ರಕಟಿಸಿದರು.

ಬಡವರ ಸಂಕಷ್ಟಗಳನ್ನು ಪರಿಹರಿಸಲು ಮತ್ತು ಸಮಾಜದಲ್ಲಿ ಬದಲಾವಣೆಗಳನ್ನು ತರುವ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ತಿಳಿಸಿದ ಅವರು, ತೆಲಂಗಾಣ ಮತ್ತು ನಕ್ಸಲ್ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸುವ ಬಗ್ಗೆ ತಮ್ಮ ಪಕ್ಷ ಶ್ರಮಿಸುತ್ತದೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+