ಆ.20ರಂದು ದಾವಣಗೆರೆ ಬಂದ್ಗೆ ಎಸ್ಎಫ್ಐ ಕರೆ
ದಾವಣಗೆರೆ,ಆ.18: ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ಗಳನ್ನು ತೆರೆಯುತ್ತಿರುವುದನ್ನು ವಿರೋಧಿಸಿ ಆ.20ರಂದು ಭಾರತೀಯ ವಿದ್ಯಾರ್ಥಿ ಸಂಘಟನೆ(ಎಸ್ಎಫ್ಐ)ದಾವಣಗೆರೆ ಜಿಲ್ಲಾ ಬಂದ್ಗೆ ಕರೆಕೊಟ್ಟಿದೆ. ಅಂದು ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ನೀಡಲು ಎಸ್ಎಫ್ಐ ವಿದ್ಯಾರ್ಥಿಗಳನ್ನು ಆಗ್ರಹಿಸಿದೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಎಸ್ಎಫ್ಐನ ಜಂಟಿ ಕಾರ್ಯದರ್ಶಿ ಆನಂದ ನಾಯ್ಕ, ವಿದೇಶಿ ವಿಶ್ವವಿದ್ಯಾಲಯಗಳನ್ನು ಇಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡುವುದರಿಂದ ಶಿಕ್ಷಣದ ಖರ್ಚುವೆಚ್ಚಗಳು ದುಬಾರಿಯಾಗುತ್ತವೆ. ಜೊತೆಗೆ ನಮ್ಮ ಶಿಕ್ಷಣ ಪದ್ಧತಿಯ ಮೌಲ್ಯ ಸಹ ಕುಸಿಯುತ್ತದೆ ಎಂದರು.
ಇಲ್ಲಿನ ಶಾಲೆ,ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದನ್ನು ಬಿಟ್ಟು ವಿದೇಶಿ ವಿಶ್ವವಿದ್ಯಾಲಯಗಳಿಗೆ ರತ್ನಗಂಬಳಿ ಹಾಕಿ ಸ್ವಾಗತ ನೀಡಿ, ಅನುಮತಿ ಕೊಡುವುದು ಎಷ್ಟು ಸಮಂಜಸ ಎಂದು ಎಸ್ಎಫ್ಐ ಆಗ್ರಹಿಸಿದೆ. ಆ.18ರಂದು ಎಸ್ಎಫ್ಐ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಜಿಲ್ಲೆಯ ಪ್ರತಿ ಶಾಲೆ ಹಾಗೂ ಕಾಲೇಜಿಗೆ ಭೇಟಿ ಕೊಟ್ಟು ''ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯ ಶಿಕ್ಷಣದ ಅಪಾಯ'' ಎಂಬುದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ನಾಯ್ಕ್ ತಿಳಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
