ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಸರ್ವಾಧಿಕಾರಿ ಮುಷರಫ್ ರಾಜೀನಾಮೆ

By Staff
|
Google Oneindia Kannada News

mush resigns as presidentಇಸ್ಲಾಮಾಬಾದ್, ಆ. 18 : ಕಳೆದ ಒಂಬತ್ತು ವರ್ಷಗಳಿಂದ ಪಾಕಿಸ್ತಾನವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸಿದ ಸರ್ವಾಧಿಕಾರಿ ಸೇನಾಧಿಕಾರಿ, ಕಾರ್ಗಿಲ್ ಯುದ್ಧದ ರೂವಾರಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ರಾಜೀನಾಮೆ ನೀಡಿದ್ದಾರೆ.

ಆಡಳಿತ ಪಕ್ಷಗಳಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಆಸೀಫ್ ಅಲಿ ಜರ್ದಾರಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ ನ ಅಧ್ಯಕ್ಷ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಹಾಗೂ ಪಾಕಿಸ್ತಾನದ ಪ್ರಧಾನಮಂತ್ರಿ ಯೂಸೆಪ್ ರಜಾ ಘಿಲಾನಿ ಅವರು ಅಧ್ಯಕ್ಷ ಸ್ಥಾನಕ್ಕೆ ಮುಷರಫ್ ರಾಜೀನಾಮೆ ಬೇಕು ಎಂದು ಪಟ್ಟು ಹಿಡಿದಿದ್ದರು. ಅಲ್ಲದೇ ಮುಷರಷ್ ತಮ್ಮ ಆಡಳಿತ ಅವಧಿಯಲ್ಲಿ ಅನೇಕ ಹಗರಣಗಳನ್ನು ಮಾಡಿದ್ದಾರೆ ಎಂದು ದೋಷಾರೂಪಣೆ ಪಟ್ಟಿ ಸಲ್ಲಿಸುವ ತಯಾರಿ ಮಾಡಲಾಗಿತ್ತು. ಹಗರಣಗಳ ಆಧಾರದ ಮೇಲೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲು ಸಿದ್ಧತೆಯನ್ನು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ನಿವೃತ್ತಿಯ ಜೀವನವನ್ನು ವಿದೇಶದಲ್ಲಿ ಕಳೆಯುವ ಇಂಗಿತವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ.

ಪಾಕ್ ಜನತೆಯನ್ನು ಉದ್ದೇಶಿಸಿ ಮುಷರಫ್ ಮಾಡಿರುವ ಭಾಷಣದ ಕೆಲ ಮುಖ್ಯಾಂಶಗಳು.

ಕಳೆದ ಒಂಬತ್ತು ವರ್ಷಗಳಲ್ಲಿ ದೇಶಕ್ಕಾಗಿ ತಾವು ಮಾಡಿದ ನಿಶ್ವಾರ್ಥದಿಂದ ಸೇವೆ ಮಾಡಿರುವೆ. ಆಡಳಿತ, ಕಾನೂನು ಸುವ್ಯವಸ್ಥೆಗೆ ಅನುಗುಣವಾಗಿ ಸಂವಿಧಾನ ರೀತಿಯಲ್ಲಿ ಕಾರ್ಯನಿರ್ವಹಿಸಿರುವೆ. ದೇಶಕ್ಕೆ ಎರಡು ಯುದ್ಧಗಳನ್ನು ಎದುರಿಸಿತು. ಅದನ್ನು ಸಮರ್ಥವಾಗಿ ಎದುರಿಸಿದ್ದೇವೆ. ದೇಶವನ್ನು ಪರಮಾಣು ರಾಷ್ಟ್ರವಾಗಿ ಮಾಡುವ ಮೂಲಕ ಜಗತ್ತಿನಲ್ಲಿ ಪಾಕಿಸ್ತಾನ ಎದೆಯುಬ್ಬಿಸಿ ನಡೆಯುಂತೆ ಮಾಡಿದ ಕೀರ್ತಿ ನಮ್ಮ ಆಡಳಿತಕ್ಕೆ ಸಲ್ಲಬೇಕು. ದೇಶಕ್ಕೆ ಎದುರಾಗಿದ್ದ ಅನೇಕ ಗಂಡಾಂತರಗಳನ್ನು ಕೊನೆಗಾಣಿಸಲಾಗಿದೆ. ಆರ್ಥಿಕವಾಗಿ ದೇಶವನ್ನು ಉನ್ನತ ಮಟ್ಟದಲ್ಲಿ ತಂದು ನಿಲ್ಲಿಸಿರುವೆ. ದೇಶದ ಹಿತಾಶಕ್ತಿಗೆ ಅನುಗುಣವಾಗಿ , ಪಾಕಿಸ್ತಾನದ ಜನಜೀವನವನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿರುವೆ. ನನ್ನ ಅಧಿಕಾರದ ಅವಧಿಯಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಿರುವೆ.

ನನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿರುವೆ. ಪಾಕ್ ಸಂಸ್ಕ್ರತಿಯನ್ನು ಜೀವಂವಾಗಿಡಲು ಯೋಡನೆಯನ್ನು ಹಮ್ಮಿಕೊಂಡಿದ್ದೇನೆ. ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ. ಶೈಕ್ಷಿಣಿಕ ಕ್ಷೇತ್ರದಲ್ಲೂ ಸಾಕ್ಷ್ಟು ಸಾಧನೆ ಮಾಡಿದ್ದೇನೆ. ಪಾಕಿಸ್ತಾನವನ್ನು ಭಯೋತ್ಪಾದನೆಯ ದೇಶ ಎಂಬುದನ್ನು ತೊಡೆದು ಹಾಕಿದ್ದೇನೆ. ಮಿಲಿಟರಿ ಆಡಳಿತದಿಂದ ದೇಶಕ್ಕೆ ಒಳ್ಳೆಯದಾಗಿದೆ. ಮಹಿಳಾ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ನನಗೆ ಪಾಕಿಸ್ತಾನದ ಸಮಗ್ರತೆಯನ್ನು ಉಳಿಸಿದ ಹೆಮ್ಮೆಯಿದೆ. ನನಗೆ ಪ್ರಜಾಪ್ರಭುತ್ವದಲ್ಲಿ ಗೌರವವಿದೆ. ದೇಶದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಿದ್ದೇನೆ. ದೇವರಲ್ಲಿ ಅಚಲವಾದ ನಂಬಿಕೆಯಿದೆ.

(ದಟ್ಸ್ ಕನ್ನಡ ವಾರ್ತೆ)
ಆಗಸ್ಟ್14ರಂದು ಪರ್ವೇಜ್ ಮುಷರಪ್ ಪದವಿ ತ್ಯಾಗ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X