ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಗೆ ಗುಡಬೈ ಹೇಳಿದ ಉಮೇಶ ಕತ್ತಿ

By Staff
|
Google Oneindia Kannada News

Umesh kattiಬೆಂಗಳೂರು, ಆ. 18 : ಭಾರತೀಯ ಜನತಾ ಪಕ್ಷದ ಆಪರೇಶನ್ ಕಮಲ ಮುಂದುವರೆದಿದ್ದು, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಜೆಡಿಎಸ್ ನ ಮತ್ತೊಂದು ವಿಕೆಟ್ ಉರುಳಿದಂತಾಗಿದೆ.

ಕಳೆದ ಅನೇಕ ದಿನಗಳಿಂದ ಉಮೇಶ್ ಕತ್ತಿ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಉಹಾಪೋಹಗಳು ಎದ್ದಿದ್ದವು. ಅವರ ಮಾತಿನ ಶೈಲಿಯಲ್ಲಿ ಕೂಡಾ ಸಾಮ್ಯತೆ ಕಂಡುಬಂದಿತ್ತು. ಅದು ಇಂದು ನಿಜವಾಗಿದೆ. ಪ್ರಭಾವಿ ನಾಯಕರೆನಿಸಿರುವ ಉಮೇಶ್ ಕತ್ತಿ ಬಿಜೆಪಿ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬರುವುದರಲ್ಲಿ ಎರಡು ಮಾತಿಲ್ಲ. ಆದರೆ ಮುಂಬೈ ಕರ್ನಾಟಕ ಭಾಗದ ಜೆಡಿಎಸ್ ಪಕ್ಷದ ಕೆಲವೇ ಶಾಸಕರಲ್ಲಿ ಕತ್ತಿ ಕೂಡಾ ಒಬ್ಬರಾಗಿದ್ದರು. ಇದೀಗ ಅವರು ರಾಜೀನಾಮೆ ನೀಡಿರುವುದು ಜೆಡಿಎಸ್ ಗೆ ಭಾರಿ ಹಿನ್ನೆಡೆ ಎನ್ನಲಾಗಿದೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷದ ಸ್ಥಿತಿ ಚಿಂತಾಜನಕವಾಗಿದೆ. ಈ ಶೋಚನೀಯ ಸಂದರ್ಭದಲ್ಲಿ ಪ್ರಭಾವಿ ನಾಯಕರೊಬ್ಬರು ಪಕ್ಷ ತೊರೆದಿರುವುದು ಜೆಡಿಎಸ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಮೇಶ ಕತ್ತಿ, ಜೆಡಿಎಸ್ ವರಿಷ್ಛರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಒಂದು ಪಕ್ಷವಾಗಿ ಉಳಿದಿಲ್ಲ. ಅದೊಂದು ಕುಟುಂಬ ಪಕ್ಷ. ಆ ಪಕ್ಷಕ್ಕೆ ಭವಿಷ್ಯವೇ ಇಲ್ಲ. ಆ ಪಕ್ಷದ ನಾಯಕರಿಗೆ ಬೇರೆಯವರನ್ನು ಬೆಳೆಸುವ ಉದ್ದೇಶವಿಲ್ಲ. ಎಲ್ಲ ತೀರ್ಮಾನಗಳು ತಮ್ಮ ಮೂಗಿನ ನೇರಕ್ಕೆ ನಡೆಯಬೇಕು. ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಡೆದ ರಾಜಕೀಯ ಬೆಳೆವಣಿಗೆಯಲ್ಲಿ ನಾಯಕರು ದ್ವಂದ್ವ ನಿಲುವು ಅನುಸರಿಸಿದ್ದಾರೆ. ದೆಹಲಿಯಲ್ಲಿ ಒಂದು ಮಾತು, ಬೆಂಗಳೂರಿನಲ್ಲಿ ಇನ್ನೊಂದು ರಾಜಕೀಯ ಮಾಡುತ್ತಿದ್ದಾರೆ. ಅವಕಾಶವಾದಿತನ ರಾಜಕೀಯಕ್ಕೆ ದೇವೇಗೌಡರು ಎತ್ತಿಕೈ ಎಂದು ಕಿಡಿಕಾರಿದರು.

ಅಧಿಕಾರಕ್ಕೆ ಬಂದು ಕೆಲವೆ ದಿನಗಳಲ್ಲಿ ಬಿಜೆಪಿ ಉತ್ತಮ ಅಡಳಿತ ನೀಡಿದೆ. ಗ್ರಾಮೀಣ ಜನರ ಭಾವನೆಗಳಿಗೆ ಸರ್ಕಾರ ಸ್ಪಂದಿಸುವ ರೀತಿಯಿಂದಾಗಿ ಅನೇಕ ಜನರ ಬಿಜೆಪಿ ಕಡೆಗೆ ಆಕರ್ಷಿತರಾಗಿದ್ದಾರೆ. ಆದ್ದರಿಂದ ಬಿಜೆಪಿ ಸೇರ್ಪಡೆಗೊಂಡಿರವೆ ಎಂದು ಕತ್ತಿ ಸ್ಪಷ್ಟಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)
ಸಿದ್ದು ಬಲೆಗೆ ರೆಡ್ಡಿಸ್ ಮಾರಿಷಸ್ ಗೆ ಪ್ರಯಾಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X