ಗಾಂಧಿಜಯಂತಿಯಂದು ಕುಮಾರಸ್ವಾಮಿ ಪಾದಯಾತ್ರೆ
ಬೆಂಗಳೂರು, ಆ.18: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ನ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅಕ್ಟೋಬರ್ 2ರ ಗಾಂಧಿಜಯಂತಿಯಂದು ರಾಜ್ಯದಾದ್ಯಂತ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ,ರಸಗೊಬ್ಬರ ಕೊರತೆ ಹಾಗೂ ಮತ್ತಿತ್ತರ ಕೃಷಿ ಸಂಬಂಧಿ ಬಿಕ್ಕಟ್ಟಿನಿಂದ ಬಳಲುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಬೆಳೆಸಲು ಬೀದರ್ನಿಂದ ಚಾಮರಾಜನಗರದ ತನಕ ಅವರು ಪಾದಯಾತ್ರೆ ಮಾಡಲಿರುವುದಾಗಿ ತಿಳಿಸಿದ್ದಾರೆ.
ಪಾದಯಾತ್ರೆಯ ಮೂಲಕ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ದಕ್ಷಿಣದ ಕರ್ನಾಟಕದ ಜಿಲ್ಲೆಗಳ ತನಕ ಪ್ರವಾಸ ಮಾಡಲಿದ್ದೇನೆ. ಪಾದಯಾತ್ರೆಯ ವೇಳೆ ರೈತರ ಮನೆಗಳಿಗೆ ಭೇಟಿ ಕೊಟ್ಟು ಅವರೊಂದಿಗೆ ಸಂವಾದ ಮಾಡಲಿರುವುದಾಗಿ ಅವರು ಹೇಳಿದರು.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
