ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಹೆರಿಗೆಯಲ್ಲಿ ಸಪ್ತ ಶಿಶುಗಳ ಹಡೆದ ಮಹಾತಾಯಿ

By Staff
|
Google Oneindia Kannada News

ಕೈರೊ,ಆ.18: ಈಜಿಪ್ಟ್‌ನ ಮಹಾಮಾತೆ ಘಜಾಲಾ ಇಬ್ರಾಹಿಂ(27) ಒಂದೇ ಹೆರಿಗೆಯಲ್ಲಿ ಏಳು ಕಂದಮ್ಮಗಳನ್ನು ಹಡೆದಿದ್ದಾರೆ. ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ನಾಲ್ಕು ಗಂಡು ಹಾಗೂ ಮೂರು ಹೆಣ್ಣು ಕೂಸುಗಳಿಗೆ ಅವರು ಸೋಮವಾರ ಜನ್ಮ ಕೊಟ್ಟರು.

ನವಜಾತ ಶಿಶುಗಳು ತೂಕ 3.2 ಪೌಂಡ್‌ನಿಂದ 6.17 ಪೌಂಡ್‌ಗಳ ನಡುವೆ ಇದ್ದು ಎಲ್ಲ ಶಿಶುಗಳು ಆರೋಗ್ಯವಾಗಿವೆ. ನಾಲ್ಕು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಶಿಶುಗಳನ್ನು ಇನ್ಕುಬೇಟರ್‌ನಲ್ಲಿ ಇಟ್ಟು ಆರೈಕೆ ಮಾಡಲಾಗುತ್ತಿದೆ. ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಘಜಲಾ ಗರ್ಭದಲ್ಲಿ ಒಂಬತ್ತು ಶಿಶುಗಳಿದ್ದವು. ಹೆರಿಗೆಯ ನಂತರ ಎರಡು ಶಿಶುಗಳು ಅಸುನೀಗಿದವು.

ಉತ್ತ್ತರ ಈಜಿಪ್ಟಿನ ಬಹೈರಾ ಸಂಸ್ಥಾನದ ರೈತನ ಪತ್ನಿ ಘಜಲಾ ಅವರಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳಿದ್ದಾರೆ. ಈಗ ಹಡೆದಿರುವ ಹಸುಗೂಸುಗಳಿಗೆ ಎರಡು ವರ್ಷಗಳ ತನಕ ಬಟ್ಟೆ ಹಾಗೂ ಹಾಲನ್ನು ಉಚಿತವಾಗಿ ನೀಡುವುದಾಗಿ ಈಜಿಪ್ಟ್‌ನ ಆರೋಗ್ಯ ಸಚಿವರು ಪ್ರಕಟಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X