ಶೀಘ್ರದಲ್ಲೇ ಮೊಬೈಲ್‍ಗಳಲ್ಲಿ ಕನ್ನಡ ನಿಘಂಟು ಸೇವೆ

ಮೈಸೂರು,ಆ.18: ಇನ್ನು ಮುಂದೆ ಕಠಿಣ ಪದಗಳ ಅರ್ಥ ತಿಳಿಯಲು ಶಬ್ದಕೋಶಕ್ಕಾಗಿ ಪುಸ್ತಕದ ಕಪಾಟಿಗೆ ಕೈಹಾಕಬೇಕಿಲ್ಲ. ಜೇಬಿಗೆ ಕೈಹಾಕಿ ಮೊಬೈಲ್ ತೆಗೆದು ಪದಗಳ ಅರ್ಥ ಹುಡುಕಬಹುದು. ಈ ನಿಟ್ಟಿನಲ್ಲಿ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥಾನ್(ಸಿಐಐಎಲ್) ತೊಟ್ಟ ದೀಕ್ಷೆ ಫಲಿಸಿದೆ.

ಇಂಗ್ಲಿಷ್ ಭಾಷೆ ಸೇರಿದಂತೆ ಇತರೆ ಭಾರತೀಯ ಭಾಷೆಗಳಾದ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಮತ್ತು ಒರಿಯಾ ಭಾಷೆಗಳಲ್ಲಿ ಈ ಮೊಬೈಲ್ ನಿಘಂಟಿನ ಸೇವೆ ಲಭ್ಯವಾಗಲಿದೆ. ನಿಘಂಟನ್ನ್ನುಮೊಬೈಲ್‍ಗಳಿಗೆ ಅಳವಡಿಸುವ ಕುರಿತು ಮೊಬೈಲ್ ನಿರ್ಮಾಣ ಸಂಸ್ಥೆಗಳನ್ನು ಈಗಾಗಲೇ ಮೈಸೂರಿನ ಸಿಐಐಎಲ್ ಸಂಸ್ಥೆ ಸಂಪರ್ಕಿಸಿದೆ. ಶೀಘ್ರದಲ್ಲೇ ನಿಘಂಟು ಸೇವೆ ಮೊಬೈಲ್‌ಗಳಲ್ಲೂ ಆರಂಭವಾಗಲಿದೆ. ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಂಡು 'ಸರ್ಚ್' ಬಟನ್ ಮೂಲಕ ಪದಗಳ ಅರ್ಥ ಹುಡುಕಬಹುದು.

ಮೊದಲು ಈ ಸೌಲಭ್ಯವನ್ನು ಅನುವಾದಕರಿಗೆ ಹಾಗೂ ಶಿಕ್ಷಣ ತಜ್ಞರಿಗೆ ಒದಗಿಸಿ ನೆರವಾಗಬೇಕೆಂಬುದು ಸಿಐಐಎಲ್‌ನ ಗುರಿ. ಆದರೆ ಈ ಯೋಜನೆ ಜನ ಸಾಮಾನ್ಯರಿಗೆ ದೊಡ್ಡ ಮಟ್ಟದಲ್ಲಿ ಸಿಗಲಿ ಎಂಬುದು ಸಂಸ್ಥೆಯ ನಿರ್ದೇಶಕ ಉದಯ್ ನಾರಾಯಣ್ ಸಿಂಗ್ ಅವರ ಆಶಯ. ಮೊಬೈಲ್ ನಿಘಂಟಿಗೆ ಪುಸ್ತಕ ರೂಪದ ಶಬ್ದಕೋಶದಲ್ಲಿರುವಷ್ಟು ವಿಸ್ತಾರವಾದ ಅರ್ಥವಲ್ಲದೆ ಅದರ ಸಂಕ್ಷಿಪ್ತ ರೂಪ ನೀಡಲು ಪ್ರಯತ್ನಿಸಲಾಗುತ್ತಿದೆ.

ಮೊಬೈಲ್ ನಿಘಂಟನ್ನು ದಕ್ಷಿಣ ಭಾರತದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ. ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ನಂತರ ಉತ್ತರದ ರಾಜ್ಯಗಳಿಗೆ ವಿಸ್ತರಿಸುವ ಯೋಜನೆ ಇದೆ. ಪ್ರಸ್ತುತ ಸಿಐಐಎಲ್ ಇಂಗ್ಲೆಂಡ್ ಮೂಲದ ಓರಿಯಂಟಲ್ ಲಾಂಗ್ಮನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ 20 ಭಾರತೀಯ ಭಾಷೆಗಳ ಶಬ್ದಕೋಶವನ್ನು ಸಿದ್ಧಪಡಿಸುತ್ತಿದೆ. 2009ಕ್ಕೆ 11ಭಾಷೆಯ ಪುಸ್ತಕ ರೂಪದ ಶಬ್ದಕೋಶಗಳು ಬಿಡುಗಡೆಯಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+