ಪದಕದ ಆಸೆ ಭಗ್ನ; ಬಾಕ್ಸರ್ ಅಖಿಲ್ ಕುಮಾರ್ ಹೊರಕ್ಕೆ
ಬೀಜಿಂಗ್, ಆ. 18 : ಒಲಿಂಪಿಕ್ಸ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕದ ಆಸೆ ಹುಟ್ಟಿಸಿದ್ದ ಅಖಿಲ್ ಕುಮಾರ್ ಉತ್ತಮ ಆಟ ಪ್ರದರ್ಶನ ನೀಡದೆ ಕ್ವಾಟರ್ ಫೈನಲ್ ನಲ್ಲಿ ಸೋತು ನಿರ್ಗಮಿಸಿದ್ದಾರೆ. ವಿಶ್ವ ಚಾಂಪಿಯನ್ ರಷ್ಯದ ಸರ್ಗಿ ವೊಡಾಪಿನೊವ್ ಅವರನ್ನು ಬಗ್ಗು ಬಡೆದಿರುವುದರಿಂದ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.
ಬಾಕ್ಸಿಂಗ್ ನಲ್ಲಿ ಘಟಾಘಟಿಗಳನ್ನು ಸೋಲಿಸುವ ಮೂಲಕ ತಲುಪಿರುವ ಪ್ರವೇಶಿಸಿರುವ ಅಖಿಲ್ ಕುಮಾರ್ ಇಂದು ಸಂಜೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಲ್ಡೋವ್ ನ ವಿಸಸ್ಲಾವ್ ಗೋಜಾನ್ ಅವರ ವಿರುದ್ಧ 10-3 ರ ಅಂತರದಿಂದ ಸೋಲುಂಡಿದ್ದಾರೆ. ಲೋ ವೈಟ್ 54ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಖಿಲ್ ಇಂದು ಉತ್ತಮ ಹೊಡೆತಗಳನ್ನು ಪ್ರದರ್ಶಿಸದೆ ಎರಡು ಸುತ್ತಿನಲ್ಲೇ ಪಂದ್ಯ ಬಿಟ್ಟುಕೊಟ್ಟರು.
ಅಖಿಲ್ ಕಮಾರ್ 2005ರಲ್ಲಿ ಫ್ರಾನ್ಸ್ ನಲ್ಲಿ ನಡೆದ ಬಾಕ್ಸಿಂಗ್ ನಲ್ಲಿ ಬೆಳ್ಳಿ ಪದಕವನ್ನು ಗಳಿಸಿದ್ದರು. ಬಾಕ್ಸಿಂಗ್ ನ ಇನ್ನೆರಡು ವಿಭಾಗಗಳಲ್ಲಿ ಭಾರತದ ವಿಜೇಂದರ್ ಹಾಗೂ ಜಿತೇಂದರ್ ಕೂಡ ಕ್ವಾಟರ್ ಫೈನಲ್ ತಲುಪಿರುವುದರಿಂದ ಪದಕದ ಆಸೆ ಜೀವಂತವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಒಲಿಂಪಿಕ್ಸ್: ಬಾಕ್ಸರ್ ಅಖಿಲ್ ಮೇಲೆ ಭಾರಿ ನಿರೀಕ್ಷೆ


Click it and Unblock the Notifications
