ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೇಬಲ್ ಟೆನ್ನಿಸ್: ಒಲಿಂಪಿಕ್ಸ್ ನಿಂದ ನೇಹಾ ಹೊರಕ್ಕೆ

By Staff
|
Google Oneindia Kannada News

ಬೀಜಿಂಗ್, ಆ. 18 : ಅಭಿನವ್ ಬಿಂದ್ರಾ ಚಿನ್ನದ ಪದಕ ನಂತರ ಭಾರತದ ಆಟಗಾರರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಲಿನ ಅಭಿಯಾನವನ್ನು ಮುಂದುವರೆಸಿದ್ದಾರೆ. ಇಂದು ನಡೆದ ಟೇಬಲ್ ಟೆನ್ನಿಸ್ ಆಟದಲ್ಲಿ ಭಾರತದ ನೇಹಾ ಅಗರವಾಲ್ ಅವರು ಚೀನಾ ಜಿಯಾನ್ ಪಾಂಗ್ ಲೇ ವಿರುದ್ಧ ಕೇವಲ ಅರ್ಧ ಗಂಟೆಯಲ್ಲೇ ಯಾವ ಪ್ರತಿರೋಧ ತೋರದೆ ಹೀನಾಯವಾಗಿ ಸೋಲನ್ನು ಅನುಭಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದರು.

ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದ ದೆಹಲಿ ಮೂಲದ ನೇಹಾ ಅಗರವಾಲ್ ಇಂದು ನಡೆದ ಪಂದ್ಯದಲ್ಲಿ ಹಿರಿಯ ಆಟಗಾರ್ತಿ ಚೀನಾ ಜಿಯಾನ್ ಪಾಂಗ್ ಲೇ ವಿರುದ್ಧ 12-10, 8-11, 11-13, 8-11, ಮತ್ತು 4-11 ಅಂಕಗಳಿಸುವ ಮೂಲಕ ಸೋಲುಂಡು ಮೊದಲ ಸುತ್ತಿನಲ್ಲೇ ಪಂದ್ಯದಿಂದ ಹೊರಬಿದ್ದರು. ಭಾರತೀಯ ಆಟಗಾರ್ತಿಯು ಪ್ರತಿರೋಧ ತೋರುವಲ್ಲಿ ವಿಫಲರಾದರು. ಅಥ್ಲೇಟೀಕ್ಸ್ ನಲ್ಲಿ ಟ್ರಿಪಲ್ ಜಂಪ್ ಪಂದ್ಯದ ಅರ್ಹತಾ ಸುತ್ತಿನಲ್ಲಿ ಭಾರತದ ರಂಜಿತ್ ಮಹೇಶ್ವರಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

(ದಟ್ಸ್ ಕನ್ನಡ ಕ್ರೀಡಾ ವಾರ್ತೆ)

ಒಲಿಂಪಿಕ್ಸ್: ಬಾಕ್ಸರ್ ಅಖಿಲ್ ಮೇಲೆ ಭಾರಿ ನಿರೀಕ್ಷೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X