ಒಲಿಂಪಿಕ್ಸ್ :ಬಾಕ್ಸರ್ ಅಖಿಲ್ ಕುಮಾರ್ ಮೇಲೆ ಭಾರಿ ನಿರೀಕ್ಷೆ
ಬೀಜಿಂಗ್, ಆ. 18 : ಚೀನಾದಲ್ಲಿ ನಡೆಯುತ್ತಿರುವ ಮಹಾಮೇಳ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಭಿನವ್ ಬಿಂದ್ರಾ ಚಿನ್ನ ಪದಕ ಗೆದ್ದಿರುವುದು ಭಾರತೀಯ ಆಟಗಾರರ ಇಲ್ಲಿಯವರೆಗಿನ ಸಾಧನೆಯಾಗಿದೆ. ಬಾಕ್ಸಿಂಗ್ ನಲ್ಲಿಯೂ ಅಖಿಲ್ ಕುಮಾರ್ ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವ ಚಾಂಪಿಯನ್ ರಷ್ಯದ ಸರ್ಗಿ ವೊಡಾಪಿನೊವ್ ಅವರನ್ನು ಬಗ್ಗು ಬಡೆದಿರುವದರಿಂದ ಅವರ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಬಾಕ್ಸಿಂಗ್ ನಲ್ಲಿ ಘಟಾಘಟಿಗಳನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ತಲುಪಿರುವ ಪ್ರವೇಶಿಸಿರುವ ಅಖಿಲ್ ಕುಮಾರ್ ಇಂದು ಸಂಜೆ ಮಾಲ್ಡೀವ್ಸ್ ನ ವಿಸಸ್ಲಾವ್ ಗೋಜಾನ್ ಅವರನ್ನು ಎದುರಿಸಲಿದ್ದಾರೆ. ರಷ್ಯಾದ ಸರ್ಗಿ ವೊಡಾಪಿನೊವ್ ಅವರನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಅಖಿಲ್ ಕುಮಾರ್ ಗೆಲ್ಲುವ ಛಲವನ್ನು ತೊಟ್ಟಂತಿದೆ. ಭಾರತೀಯ ಕ್ರೀಡಾ ಅಭಿಮಾನಿಗಳ ಕಣ್ಣು ಬೀಜಿಂಗ್ ನತ್ತ ನೆಟ್ಟಿದ್ದು, ಇನ್ನೊಂದು ಚಿನ್ನ ಪಡೆಯುವ ಸೌಭಾಗ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
ಅಖಿಲ್ ಕುಮಾರ್ ಗೆಲುವು ಸಾಧಿಸಲಿ ಎನ್ನುವುದು ನೂರು ಕೋಟಿ ಭಾರತೀಯ ಕನಸಾಗಿದೆ. ಅಖಿಲ್ ಕಮಾರ್ 2005ರಲ್ಲಿ ಫ್ರಾನ್ಸ್ ನಲ್ಲಿ ನಡೆದ ಬಾಕ್ಸಿಂಗ್ ನಲ್ಲಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಬಾಕ್ಸಿಂಗ್ ನ ಇನ್ನೆರಡು ವಿಭಾಗಗಳಲ್ಲಿ ಭಾರತದ ವಿಜೇಂದರ್ ಹಾಗೂ ಜಿತೇಂದರ್ ಕೂಡ ಕ್ವಾಟರ್ ಫೈನಲ್ ತಲುಪಿರುವುದರಿಂದ ಪದಕದ ಆಸೆ ಜೀವಂತವಾಗಿದೆ.
(ದಟ್ಸ್ ಕನ್ನಡ ಕ್ರೀಡಾ ವಾರ್ತೆ)
ಬಾಕ್ಸರ್ ಜಿತೇಂದರ್ ಫ್ರೀ ಕ್ವಾರ್ಟರ್ ಫೈನಲ್ ಗೆ


Click it and Unblock the Notifications
