ಸರಣಿ ಸ್ಫೋಟ : 14 ದಿನ ಪೊಲೀಸ್ ವಶಕ್ಕೆ ಸಿಮಿ ಉಗ್ರರು
ಅಹಮದಾಬಾದ್, ಆ. 18 : ಮಹತ್ವದ ಪೊಲೀಸ್ ಕಾರ್ಯಚರಣೆಯಲ್ಲಿ ಕಳೆದ ತಿಂಗಳ ಅಹಮದಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಸಿಮಿ ಸಂಘಟನೆಗೆ ಸೇರಿದ್ದಾರೆ ಎನ್ನಲಾದ 9 ಮಂದಿ ಶಂಕಿತ ಉಗ್ರರನ್ನು ಭಾನುವಾರ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ವಶದಲ್ಲಿರಿಸಿಕೊಳ್ಳಲು ಸ್ಥಳೀಯ ನ್ಯಾಯಾಲಯ ಅದೇಶಿಸಿದೆ.
ಕಳೆದ ತಿಂಗಳ ಅಹಮದಾಬಾದ್ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 55ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ನಗರದ 17 ಕಡೆಗೆ ಬಾಂಬ್ ಸ್ಫೋಟಿಸುವಲ್ಲಿ ಉಗ್ರರು ಅಂದು ಯಶಸ್ವಿಯಾಗಿದ್ದರು. ವಾಣಿಜ್ಯ ನಗರಿ ಸೂರತ್ ನಲ್ಲಿಯೂ ಉಗ್ರರು ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದರು. ಆದರೆ ಪೊಲೀಸ್ ಮತ್ತು ಬಾಂಬ್ ನಿಷ್ಕ್ರಿಯ ದಳದ ಪರಿಶ್ರಮದಿಂದ ಇನ್ನಷ್ಟು ಅನಾಹುತವಾಗುವುದನ್ನು ತಪ್ಪಿಸಲಾಗಿತ್ತು.
ಸೂರತ್ ನಗರದಲ್ಲಿ 22 ಜೀವಂತ ಬಾಂಬ್ ಗಳು ಪತ್ತೆಯಾಗಿದ್ದವು. ಉಗ್ರರ ಜಾಲವನ್ನು ಪತ್ತೆ ಹಚ್ಚಲು ತನಿಖಾ ತಂಡಗಳನ್ನು ಪೊಲೀಸ್ ಇಲಾಖೆ ನೇಮಿಸಿತ್ತು. ಕಾರ್ಯಚರಣೆ ಹಿನ್ನೆಲೆಯಲ್ಲಿ ನಿಷೇಧಿತ ಸಿಮಿ ಸಂಘಟನೆ 9 ಮಂದಿ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಮುಖ್ಯ ರೂವಾರಿ ಎನ್ನಲಾದ ಉತ್ತರ ಪ್ರದೇಶದ ಅಬು ಬಶೀರ್ ನನ್ನು ಅಹಮದಾಹಾದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ 9 ಮಂದಿ ಸಿಮಿ ಉಗ್ರರನ್ನು ಬಂಧಿಸಿರುವುದು ಸ್ಫೋಟ ಕೃತ್ಯ ಕುರಿತು ಇನ್ನಷ್ಟು ಮಹತ್ವದ ಮಾಹಿತಿಗಳು ಲಭ್ಯವಾಗುವ ಸಾಧ್ಯತೆಗಳಿವೆ. ಬಂಧಿತ ಉಗ್ರರನ್ನು ವ್ಯಾಪಕ ಬಿಗಿ ಬಂದೋಬಸ್ತ್ ನಡುವೆ ನ್ಯಾಯಾಲಯಕ್ಕೆ ಕರೆತರಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ 14 ದಿನಗಳ ಕಾಲ ಅವರನ್ನು ಪೊಲೀಸರ ವಶದಲ್ಲಿ ಇರಿಸಿಕೊಳ್ಳಬೇಕು ಎಂದು ಸ್ಥಳೀಯ ನ್ಯಾಯಾಲಯ ಸೂಚಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಅಹಮದಾಬಾದ್ ಉಗ್ರರ 7 ರೇಖಾಚಿತ್ರಗಳು ಸಿದ್ಧ
ಸೂರತ್ ನಲ್ಲಿ ಇನ್ನೊಂದು ಸಜೀವ ಬಾಂಬ್ ಪತ್ತೆ


Click it and Unblock the Notifications
