ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚಿನ್ನದ ಮೀನು ಫೆಲ್ಷ್‌ಗೆ 8ನೇ ಚಿನ್ನ

By Staff
|
Google Oneindia Kannada News

Phelps swims into Olympic history ಬೀಜಿಂಗ್, ಆ.17: 'ಅಮೆರಿಕದ ವಿಸ್ಮಯ'ಎಂದೇ ಖ್ಯಾತರಾದ ಮೈಕೇಲ್ ಫೆಲ್ಷ್ ಬೀಜಿಂಗ್ ಒಲಿಂಪಿಕ್ಸ್‌ನ ಮೆಡ್ಲಿ ರಿಲೆ ಈಜು ಸ್ಪರ್ಧೆಯಲ್ಲಿ ವೈಯಕ್ತಿಕ 8ನೇ ಚಿನ್ನದ ಪದಕ ಗೆಲ್ಲುವ ಮೂಲಕ ಭಾನುವಾರ(ಆ.17) ಹೊಸ ದಾಖಲೆ ನಿರ್ಮಿಸಿದರು.

ಅಮೆರಿಕದ ಮತ್ತೊಬ್ಬ ಈಜುಪಟು ಮಾರ್ಕ್ ಸ್ಪಿಟ್ಜ್ 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಗಳಿಸಿದ 7 ಚಿನ್ನದ ಪದಕಗಳ ದಾಖಲೆಯನ್ನು ಫೆಲ್ಷ್ ಇಂದು ಅಳಿಸಿಹಾಕಿದರು. 400 ಮೀಟರ್‌ಗಳ ಮೆಡ್ಲಿ ರಿಲೆ ಈಜು ಸ್ಪರ್ಧೆಯಲ್ಲಿ 8 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ 36ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು. ಒಂದೇ ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನೂ ಸೃಷ್ಟಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X