ಒಂದು ಕೋಟಿ ಮೀರುತ್ತಿದೆ ಲೈವ್ಬ್ಯಾಂಡ್ ಆದಾಯ!
ಬೆಂಗಳೂರು,ಆ.17: ಬೆಂಗಳೂರಿನಲ್ಲಿ ನಿತ್ಯ ನಡೆಯುತ್ತಿರುವ ಲೈವ್ಬ್ಯಾಂಡ್,ಡಿಸ್ಕೋಥೆಕ್ ಹಾಗೂ ಡ್ಯಾನ್ಸ್ಬಾರ್ಗಳಿಂದ ಪ್ರತಿ ದಿನ 20 ಲಕ್ಷ ರು.ಗಳು ಲಂಚದ ರೂಪದಲ್ಲಿ ಪೊಲೀಸರ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೇಬು ಸೇರುತ್ತಿದೆ .
ಶನಿವಾರ ಎಫ್ಕೆಸಿಸಿಐನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಈ ವಿಷಯವನ್ನು ತಿಳಿಸಿದರು. ಬೆಂಗಳೂರಿನಲ್ಲಿ ಮುಂಬೈಗಿಂತಲೂ ಹೆಚ್ಚಾಗಿ ಲೈವ್ಬ್ಯಾಂಡ್,ಡಿಸ್ಕೋಥೆಕ್ ಹಾಗೂ ಡ್ಯಾನ್ಸ್ಬಾರ್ಗಳ ವ್ಯವಹಾರ ನಡೆಯುತ್ತಿದ್ದು ಅದರ ಮೊತ್ತ ಸರಿಸುಮಾರು ಒಂದು ಕೋಟಿ ರು.ಗಳನ್ನು ಮೀರುತ್ತಿದೆ. ಅಲ್ಲಿ ಕುಣಿಯುವವರಿಗೆ, ಸಿಬ್ಬಂದಿಗೆ 50 ಲಕ್ಷ ರು.ಗಳು ಸಂದಾಯವಾಗುತ್ತಿದೆ. 20 ಲಕ್ಷ ರು.ಗಳು ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ಜೇಜು ಸೇರುತ್ತಿದೆ. ಉಳಿದ ಹಣ ಮಾಲೀಕರ ಗಲ್ಲಾಪೆಟ್ಟಿಗೆ ತುಂಬುತ್ತಿದೆ ಎಂದು ಬಿದರಿ ಲೆಕ್ಕ ನೀಡಿದರು.
ಇಂತಹ ಮೋಜಿನ ಚಟುವಟಿಕೆಗಳಿಗೆ ಶ್ರೀಮಂತರ ಮಕ್ಕಳ ಹಣ,ಭೂಮಾಫಿಯಾ, ಸುಲಿಗೆ ಹಣ ಬಂದು ಬೀಳುತ್ತಿದೆ. ಪರೋಕ್ಷವಾಗಿ ಅಪರಾಧ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಕಾರಣವಾಗುತ್ತಿದೆ. ಈ ಕಾರಣಕ್ಕಾಗಿ ಲೈವ್ಬ್ಯಾಂಡ್ಗಳಿಗೆ ಬೀಗ ಜಡಿಯಬೇಕಾಯಿತು ಎಂದು ಅವರು ವಿವರಿಸಿದರು. ಒಂದು ಕೋಟಿ ರು.ಗಳ ವ್ಯವಹಾರದಲ್ಲಿ ಯುವಕರಿಂದ 25 ಲಕ್ಷ ರು.ಗಳು ಹರಿದುಬರುತ್ತಿದೆ. ಇದರ ಜೊತೆಗೆ ಸುಲಿಗೆ,ದರೋಡೆ,ನಕಲಿ ಸಿಡಿ ದಂಧೆ ಮೂಲಗಳಿಂದ ಹಣ ತರಲಾಗುತ್ತಿದೆ ಎಂದರು.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
