ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಟಿಮೋರ್ ಬುಲೆಟ್ ಫೆಲ್ಷ್ ಗೆ ಏಳನೇ ಚಿನ್ನ

By Staff
|
Google Oneindia Kannada News

ಬೀಜಿಂಗ್, ಆ.16: ಅಮೆರಿಕದ ಚಿನ್ನದ ಮೀನು ಮೈಕಲ್ ಫೆಲ್ಷ್ ಒಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಕ್ರೀಡಾಕೂಟದಲ್ಲಿ ಏಳನೇ ಚಿನ್ನ ಗೆಲ್ಲುವ ಮೂಲಕ 36 ವರ್ಷ ಹಿಂದೆ ಸ್ಪಿಟ್ಜ್ ಅವರು ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

ಬಾಲ್ಟಿ ಮೋರ್ ಬುಲೆಟ್ ಎಂದೇ ಖ್ಯಾತರಾಗಿರುವ 6 ಅಡಿ 4 ಇಂಚಿನ ಮೈಕಲ್ ಫೆಲ್ಷ್ ಇಂದು ನಡೆದ 100 ಮೀ ಬಟರ್ ಫ್ಲೈ ಶೈಲಿ ಈಜಿನ ಫೈನಲ್ ಪಂದ್ಯದಲ್ಲಿ ಸೆರ್ಬಿಯಾದ ಮಿಲೊರಾಡ್ ಕವಿಕ್ ಅವರನ್ನು ಸೋಲಿಸಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಫೈನಲ್ ನಲ್ಲಿ ಆಸ್ಟ್ರೇಲಿಯಾದ ಆಂಡ್ರೂ ಲೋಟರ್ಸ್ಟೇನ್ ಕಂಚಿನ ಪದಕ ಗಳಿಸಿದರು. ಇದು ಫೆಲ್ಷ್ ಅವರ ಕ್ರೀಡಾ ಜೀವನದ 13 ನೇ ಚಿನ್ನದ ಪದಕವಾಗಿದೆ.

(ದಟ್ಸ್ ಕ್ರೀಡಾವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X