ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಗೆಹರಿದ ಗುಜರಾತ್ ಸ್ಫೋಟ ಪ್ರಕರಣ : ಗುಜರಾತ್ ಡಿಜಿಪಿ

By Staff
|
Google Oneindia Kannada News

Gujarat DGP PC Pandeyಅಹ್ಮದಾಬಾದ್, ಆ. 16 : ಜುಲೈ 26ರಂದು ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಬು ಬಷೀರ್ ಸೇರಿದಂತೆ ಇಲ್ಲಿಯವರೆಗೆ 10 ಸ್ಟುಡೆಂಡ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ 10 ಜನರನ್ನು ಬಂಧಿಸಲಾಗಿದ್ದು ಪ್ರಕರಣ ಬಗೆಹರಿದಂತಾಗಿದೆ ಎಂದು ಗುಜರಾತ್ ಡಿಜಿಪಿ ಪಿಸಿ ಪಾಂಡೆ ಹೇಳಿದ್ದಾರೆ.

ಅಹ್ಮದಾಬಾದ್ ಸರಣಿ ಸ್ಫೋಟ, ಬಂಧಿಸಲಾದ ವ್ಯಕ್ತಿಗಳು ಮತ್ತು ತನಿಖೆಯ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಗುಜರಾತ್ ಪೊಲೀಸ್ ಮಹಾನಿರ್ದೇಶಕ ಪಿಸಿ ಪಾಂಡೆ, ಸರಣಿ ಸ್ಫೋಟಗಳ ಮಾಸ್ಟರ್‌ಮೈಂಡ್ ಅಬು ಬಷೀರ್ ನನ್ನು ಲಖನೌದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು. ಬಷೀರ್ ವಿಚಾರಣೆಯಿಂದ ಇನ್ನೂ ಹೆಚ್ಚಿನ ವಿಷಯಗಳು ಹೊರಬೀಳಲಿವೆ ಎಂದು ಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ಸ್ಫೋಟ ನಡೆದು ಮೂರು ವಾರಗಳಲ್ಲಿಯೇ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಿರುವುದು ಗುಜರಾತ್ ಪೊಲೀಸ್ ಬಗ್ಗೆ ಹೆಮ್ಮೆ ತಂದಿದೆ. ನಮಗೆ ಕರ್ನಾಟಕ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಪೊಲೀಸರಿಂದಲೂ ಅಗತ್ಯ ಸಹಕಾರ ದೊರೆತಿದೆ. ಈ ಶ್ರೇಯಸ್ಸು ಗುಜರಾತ್ ಪೊಲೀಸರಿಗೆ ಮಾತ್ರವಲ್ಲ ಇಡೀ ರಾಷ್ಟ್ರದ ಪೊಲೀಸರಿಗೆ ಸಲ್ಲಬೇಕು. ಏಕೆಂದರೆ, ಇಡೀ ದೇಶದ ಪೊಲೀಸರು ಸಿಮಿ ಕಾರ್ಯಕರ್ತರನ್ನು ಬಂಧಿಸಲು ಗುಜರಾತ್ ಪೊಲೀಸರಿಗೆ ಸಹಾಯ ಸಲ್ಲಿಸಿದ್ದಾರೆ ಎಂದು ನುಡಿದರು.

ಸಿಮಿ ಕಾರ್ಯಕರ್ತರು 2005ರಿಂದಲೇ ರಾಷ್ಟ್ರಾದ್ಯಂತ ಭಯೋತ್ಪಾದನೆ ಹಬ್ಬಿಸಲು ಸಂಚು ಹೂಡಿದ್ದರು. ಇಂಡಿಯನ್ ಮುಜಾಹಿದ್ದಿನ್ ಸಂಘಟನೆ ಕೂಡ ಸಿಮಿ ಸಂಘಟನೆಯ ಪ್ರತಿರೂಪವೇ. ಬಂಧಿತ ಆರೋಪಿಗಳೆಲ್ಲರೂ ಸಿಮಿ ಸಂಘಟನೆಗೆ ಸೇರಿದವರೇ. ಬಂಧಿತರನ್ನು ರಾಷ್ಟ್ರದ ವಿರುದ್ಧ ಯುದ್ಧ ಸಾರಿದ ಆರೋಪ ಮತ್ತು ಐಪಿಸಿಯ ಸೆಕ್ಷನ್ 302 ಅಡಿ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪಾಂಡೆ ವಿವರಿಸಿದರು.

ಅಹ್ಮದಾಬಾದ್ ಮತ್ತು ಸೂರತ್‌ನಲ್ಲಿ ಎರಡು ವಿವಿಧ ಬಗೆಯ ಬಾಂಬ್‌ಗಳನ್ನು ಬಳಸಲಾಗಿತ್ತು. ಸೂರತ್‌ನಲ್ಲಿ ಸಿಕ್ಕ ಬಾಂಬ್‌ಗಳಲ್ಲಿ ಸಂಘಟಿತ ಚಿಪ್‌ಗಳನ್ನು ಬಳಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅವು ಸ್ಫೋಟಗೊಳ್ಳಲಿಲ್ಲ ಎಂದು ಹೇಳಿದರು.

ಬಂಧಿತ ಆರೋಪಿಗಳು : ಅಬು ಬಷೀರ್, ಯುನುಸ್ ಮನ್ಸೂರಿ, ಸಮ್ಸುದ್ದಿನ್ ಶೇಖ್, ಆರ್ಎಸ್ ಕದ್ರಿ, ಯಸುದ್ದಿನ್ ಶೇಖ್, ಉಸ್ಮಾನ್ ಅಗರಬತ್ತಿವಾಲಾ, ಇಮ್ರಾನ್, ಇಕ್ಬಾಲ್ ಶೇಖ್, ಸಾಜಿದ್ ಮನ್ಸೂರಿ ಮತ್ತು ಜಾಹಿದ್ ಶೇಖ್. ಪ್ರಮುಖ ಆರೋಪಿ ಅಬು ಬಷೀರ್ ಉತ್ತರ ಪ್ರದೇಶ ಮತ್ತು ಗುಜರಾತ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅಜಮಘರ್‌ನಲ್ಲಿ ಬಂಧಿತನಾಗಿದ್ದಾನೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X