ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹ್ಮದಾಬಾದ್ ಸ್ಫೋಟ : 8 ಸಿಮಿ ಕಾರ್ಯಕರ್ತರ ಬಂಧನ

By Staff
|
Google Oneindia Kannada News

ನವದೆಹಲಿ, ಆ. 16 : ಜುಲೈ 26ರಂದು ಅಹ್ಮದಾಬಾದ್‌ನಲ್ಲಿ ನಡೆದ ಸರಣಿ ಸ್ಫೋಟಗಳ ಹಿಂದಿನ ಪ್ರಮುಖ ಆರೋಪಿ ಸಿಮಿ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತ ನಜೀರ್ ಸೇರಿದಂತೆ 8 ಜನರನ್ನು ಗುಜರಾತ್ ಪೊಲೀಸರು ಉತ್ತರ ಪ್ರದೇಶದಲ್ಲಿ ಶನಿವಾರ ಬಂಧಿಸಿದ್ದಾರೆ.

ಈ ಬಂಧನದಿಂದಾಗಿ ಗುಜರಾತ್ ಮತ್ತು ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟಗಳ ಕುರಿತಂತೆ ನಡೆದಿರುವ ತನಿಖೆಗೆ ಬಲಬಂದಂತಾಗಿದೆ. ಈ ಸಿಮಿ ಕಾರ್ಯಕರ್ತರ ಬಂಧನದಿಂದ ಬೆಂಗಳೂರಿನ ಸರಣಿ ಸ್ಫೋಟಗಳಲ್ಲದೇ ದೇಶದ ಇತರೆಡೆಗಳಲ್ಲಿಯೂ ಸಿಮಿ ಸಂಘಟನೆ ಮರೆಯಲ್ಲಿ ನಡೆಸಿರುವ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಕೇರಳ, ಕರ್ನಾಟಕ, ಸೂರತ್ ಮತ್ತು ಭರೂಚ್‌ಗಳಲ್ಲಿ ಬಾಂಬ್ ಸ್ಫೋಟಗೊಳಿಸುವ ಕುರಿತು ಸಿಮಿ ಸಂಘಟನೆ ಅನೇಕ ಸಭೆಗಳನ್ನು ನಡೆಸಿತ್ತು. ಈ ವಿಷಯ ಉತ್ತರ ಪ್ರದೇಶದ ಅಜಮ್‌ಘರ್‌ನಲ್ಲಿ ಬಂಧಿಸಲಾದ ಅಬು ಬಶಾರ್‌ನ ಹೇಳಿಕೆಯಿಂದ ಬಹಿರಂಗವಾಗಿದೆ. ಈ ಅಹ್ಮದಾಬಾದ್ ಸ್ಫೋಟಗಳ ಪ್ರಮುಖ ಆರೋಪಿಯೆನ್ನಲಾಗಿರುವ ನಜೀರ್ ಬಂಧನದಿಂದ ಮತ್ತಷ್ಟು ವಿಷಯಗಳು ತಿಳಿಯುವ ಸಾಧ್ಯತೆಯಿದೆ.

ಅಹ್ಮದಾಬಾದ್‌ನಲ್ಲಿ ಜುಲೈ 26ರಂದು ನಡೆದ ಸರಣಿಗಳಲ್ಲಿ 55 ಜನ ಸತ್ತು ನೂರಾರು ಜನ ಗಾಯಗೊಂಡಿದ್ದರು. ಬೆಂಗಳೂರಿನಲ್ಲಿ ಜುಲೈ 25ರಂದು ನಡೆದ ಸರಣಿ ಸ್ಫೋಟಗಳಲ್ಲಿ ಒಬ್ಬ ಸತ್ತು ಐವರು ಗಾಯಗೊಂಡಿದ್ದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X