ಸಾನಿಯಾ-ಸುನೀತಾ ಜೋಡಿ ಒಲಿಂಪಿಕ್ಸ್ ನಿಂದ ಹೊರಕ್ಕೆ
ಬೀಜಿಂಗ್ , ಆ.14: ಗಾಯಾಳುವಾಗಿರುವ ಸಾನಿಯಾ ಮಿರ್ಜಾ ಹಾಗೂ ಸುನೀತಾ ರಾವ್ ಅವರನ್ನೊಳಗೊಂಡ ಭಾರತದ ಮಹಿಳೆಯರ ತಂಡ ಒಲಿಂಪಿಕ್ಸ್ ಟೆನ್ನಿಸ್ ಡಬಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದೆ.
ಅಗ್ರಶ್ರೇಯಾಂಕಿತ ಆಟಗಾರ್ತಿ ರಷ್ಯಾದ ಸ್ವೆಟ್ಲೇನಾ ಕುರ್ಜ್ನೆತ್ಸೊವಾ ಹಾಗೂ ದಿನಾರಾ ಸಫಿನ್ ಎದುರು ಎರಡನೇ ಸುತ್ತಿನಲ್ಲಿ ಸಾನಿಯಾ ಹಾಗು ಸುನೀತಾ ಜೋಡಿ ಸೋಲುಂಡಿದ್ದಾರೆ. ಕೇವಲ ಒಂದೂವರೆ ಗಂಟೆಗಳ ಕಾಲ ನಡೆದ ಪಂದ್ಯಾವಳಿಯನ್ನು ರಷ್ಯಾದ ಜೋಡಿ 6-4, 6-4ರ ನೇರ ಸೆಟ್ ಗಳಲ್ಲಿ ಗೆದ್ದುಕೊಂಡಿತು.
ಮಣಿಕಟ್ಟಿನ ನೋವಿನಿಂದ ಸಾನಿಯಾ ಬಳಲುತ್ತಿದ್ದರೆ, ಸುನೀತಾ ಬಲತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ತೊಂದರೆ ಅನುಭವಿಸುತ್ತಿದ್ದರು. ಇಬ್ಬರು ಆಟಗಾರ್ತಿರು ಪಂದ್ಯಕ್ಕೆ ಪೂರ್ಣಪ್ರಮಾಣದ ದೇಹ ಸ್ವಾಸ್ಥ್ಯವನ್ನು ಹೊಂದಿರಲಿಲ್ಲ ಎಂದು ಹೇಳಲಾಗಿದೆ. ಭಾರತದ ಪುರುಷರ ಜೋಡಿಯಾದ ಮಹೇಶ್ ಭೂಪತಿ ಹಾಗೂ ಲಿಯಾಂಡರ್ ಪೇಯಸ್ ಕ್ವಾಟರ್ ಫೈನಲ್ ಹಂತ ತಲುಪಿ ಪದಕದ ಆಸೆ ಮೂಡಿಸಿದ್ದಾರೆ.
(ದಟ್ಸ್ ಕನ್ನಡವಾರ್ತೆ)
ಪೇಸ್,ಭೂಪತಿ ಜೋಡಿ ಕ್ವಾರ್ಟರ್ ಫೈನಲ್ಗೆ ಪ್ರವೇಶ
ಒಲಿಂಪಿಕ್ಸ್: ಕ್ವಾ.ಫೈನಲ್ ನಲ್ಲಿ ಮುಗ್ಗರಿಸಿದ ಸೈನಾ


Click it and Unblock the Notifications
