ಫಲ್ಗುಣಿ ನದಿ ದುರಂತದ ಬಗ್ಗೆ ಪೊಲೀಸ್ ವರದಿ

ಮಂಗಳೂರು, ಆ.14:ಇಂದು ನಡೆದ ಶಾಲಾ ಬಸ್ ದುರಂತದ ಬಗ್ಗೆ ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ನೀಡಿರುವ ವಿವರಣಾತ್ಮಕ ಪತ್ರಿಕಾ ಪ್ರಕಟಣೆ ಇಲ್ಲಿದೆ.

ಈ ದಿನ ದಿನಾಂಕ 14/08/2008 ರಂದು ಬೆಳಿಗ್ಗೆ ಸುಮಾರು 9:00 ಗಂಟೆಯ ಸಮಯಕ್ಕೆ ದ.ಕ.ಜಿಲ್ಲೆಯ ಮಂಗಳೂರು ತಾಲ್ಲೂಕಿನ ಉಳಾಯಿಬೆಟ್ಟು ಗ್ರಾಮದ ಪರಾರಿ ಸೇತುವೆ ಬಳಿ ಕೈಕಂಬದ ಬಾಲ್ಮಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮಕ್ಕಳನ್ನು ಉಳಾಯಿಬೆಟ್ಟು ಮತ್ತು ಮಲ್ಲೂರು ಪರಿಸರದಿಂದ ಶಾಲಾ ವಾಹನದಲ್ಲಿ ಕರೆದುಕೊಂಡು ಬರುತ್ತಿರುವಾಗ ಶಾಲಾ ಮಕ್ಕಳು ಸೇರಿದಂತೆ ಸುಮಾರು 32 ಜನರಿದ್ದ ವಾಹನದ ಚಾಲಕನು ತನ್ನ ವಾಹನ ಸಂಖ್ಯೆ KA-37-3493ನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿದ ಕಾರಣ ಫಲ್ಗುಣಿ ನದಿಗೆ ನೀರಿಗೆ ಬಿದ್ದಿದ್ದು, ತಕ್ಷಣ ಊರ ಜನರ ಸಹಾಯದಿಂದ ವಾಹನದಲ್ಲಿದ್ದ 11 ಜನರನ್ನು ಸಂರಕ್ಷಿಸಲಾಗಿದೆ.

1. ಹಸನ್ ಮುಸಾದ್ [8ವರ್ಷ], 2. ಸಾಜಿದ್ [8ವರ್ಷ], 3. ಯೂಸುಫ್ ತೌಸಿಫ್ [7ವರ್ಷ], 4. ವಿಜಾದ್ [9ವರ್ಷ],5. ಉನಾಫ್[7ವರ್ಷ], 6. ಸತ್ತಾರ್ [6ವರ್ಷ],7. ಹಸನ್ [9ವರ್ಷ] ಮತ್ತು ಇತರ 4 ಮಕ್ಕಳನ್ನು ಅಂದರೆ ಒಟ್ಟು 11 ಜನರನ್ನು ರಕ್ಷಿಸಲಾಗಿರುತ್ತದೆ. ಇನ್ನು ಉಳಿದವರ ಬಗ್ಗೆ ತಕ್ಷಣ ಸ್ಥಳಕ್ಕೆ ಧಾವಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕದಳ ಮತ್ತು ಸ್ಥಳೀಯ ಮುಳುಗುಗಾರರು ಮತ್ತು ಸಾರ್ವಜನಿಕರು 11 ಜನರ ಶವಗಳನ್ನು ಹೊರಕ್ಕೆ ತೆಗೆಯಲಾಗಿರುತ್ತದೆ. ಮೃತರಲ್ಲಿ 2 ಜನ ಗಂಡಸರು, 2 ಜನ ಹೆಂಗಸರು ಹಾಗೂ 3 ಜನ ಹುಡುಗರು ಹಾಗೂ 4 ಜನ ಹೆಣ್ಣುಮಕ್ಕಳಾಗಿರುತ್ತಾರೆ.

ಮೃತರ ವಿವರಗಳು ಈ ಕೆಳಕಂಡಂತೆ ಇರುತ್ತದೆ.

1. ಕುಮಾರಿ ಹಸೀನಾ [7ವರ್ಷ], ಉಳಾಯಿಬೆಟ್ಟು
2. ಹಫೀಸಾ [6ವರ್ಷ] 2ನೇ ತರಗತಿ, ತಂದೆ: ಅಬ್ದುಲ್ ರಜಾಕ್ ,ಗುರುಪುರ. ಮೇಲ್ಮನೆ ಹೌಸ್, ಮಂಗಳೂರು ತಾಲೂಕು.
3. ಅಪಜಲ್ ಇಸ್ಮಾಲ್ [10 ವರ್ಷ], 4ನೇ ತರಗತಿ, ತಂದೆ:ಅದನು ಇಸ್ಮಾಲ್, ಮುಬಾರಕ್ ಮಂಝಿಲ್, ಪರಾರಿ, ವಾಮಂಜೂರು, ಮಂಗಳೂರು.
4. ಕುಮಾರಿ ಸಬ್ರಿನಾ [10 ವರ್ಷ], ತಂದೆ: ಉಮರಬ್ಬ 4ನೇ ತರಗತಿ, ಪರಾರಿ, ವಾಮಂಜೂರು, ಮಂಗಳೂರು ತಾಲೂಕು.
5. ಮಾಸಿರ [6 ವರ್ಷ], ತಂದೆ:ಹಮ್ಮಬ್ಬ, ಕಾಂತರ ಬೆಟ್ಟು ಮನೆ, ಉಳಾಯಿಬೆಟ್ಟು ಗ್ರಾಮ, ಮಂಗಳೂರು.
6. ಕಮಲಾಕ್ಷ [33ವರ್ಷ], ತಂದೆ: ದಿ! ದಯಾನಂದ ಪೂಜಾರಿ, ವಾಸ:ಪೆರ್ಮಂಕಿ, ಉಳಾಯಿಬೆಟ್ಟು, ಮಂಟನೆ ಹೌಸ್, ಮಂಗಳೂರು ತಾಲೂಕು.
7. ಬದ್ರುದ್ದೀನ್ [28ವರ್ಷ], ವಾಹನ ಚಾಲಕ, ತಂದೆ:ಹಸನಬ್ಬ, ವಾಸ:ಮಠದ ಗುಡ್ಡೆ, ಗುರುಪುರ.
8. ಸಾರಮ್ಮ [40ವರ್ಷ], ಗಂಡ: ಅಬೂ ಬ್ಯಾರಿ, ಕಾಂತರ ಬೆಟ್ಟು ಮನೆ, ಉಳಾಯಿಬೆಟ್ಟು ಗ್ರಾಮ, ಮಂಗಳೂರು.
9. ರಮ್ಲತ್ [20ವರ್ಷ], ತಂದೆ: ಅಬೂ ಬ್ಯಾರಿ, ಕಾಂತರ ಬೆಟ್ಟು ಮನೆ, ಉಳಾಯಿಬೆಟ್ಟು ಗ್ರಾಮ, ಮಂಗಳೂರು.

ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 172/08 ಕಲಂ 279, 337, 304(ಎ) ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿರುತ್ತದೆ. ಖಾಸಗಿ ಬಸ್ ಗಳ ಪ್ರತಿಭಟನೆಯಿಂದಾಗಿ ಇಂದು ಬಸ್ ಸಂಚಾರ ಸ್ಥಗಿತಗೊಂಡಿತ್ತು. ನಿರಂತರ ಮಳೆ ಹಾಗೂ ರಭಸವಾಗಿ ಹರಿಯುತ್ತಿರುವ ನದಿಯಿಂದ ಪರಿಹಾರ ಕಾರ್ಯ ನಿಧಾನವಾಗಿದೆ. ಘಟನಾ ಸ್ಥಳಕ್ಕೆ ಗೃಹ ಸಚಿವ ವಿ.ಎಸ್ .ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್, ಕಾಂಗ್ರೆಸ್ ಸಚಿವ ಯುಟಿ ಖಾದರ್ ಭೇಟಿ ನೀಡಿ ಪರಿಹಾರ ಕಾರ್ಯವನ್ನು ವೀಕ್ಷಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ : 0824-2220500 ಸಂರ್ಪಕಿಸಬಹುದು.
ಪೊಲೀಸ್ ಕಚೇರಿ : 0824 2220503

ಸುದ್ದಿ ಕೃಪೆ: ದಕ್ಷಿಣ ಕನ್ನಡ ಪೊಲೀಸ್ ಇಲಾಖೆ

40 ಜನರಿದ್ದ ಶಾಲಾ ಬಸ್ ಫಲ್ಗುಣಿ ನದಿ ಪಾಲು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+