ವಿಪ್ರೊ ಪ್ರತಿಷ್ಠಾನದಿಂದ ಖಾಸಗಿ ವಿವಿ ಸ್ಥಾಪನೆ

ಬೆಂಗಳೂರು, ಆ.12: ರಾಜ್ಯದಲ್ಲಿ ವಿಶ್ವದರ್ಜೆಯ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಸಾಫ್ಟ್‌ವೇರ್ ಕ್ಷೇತ್ರದ ಮುಂಚೂಣಿ ಸಂಸ್ಥೆ ವಿಪ್ರೊ ಮುಂದಾಗಿದೆ. ವಿಪ್ರೊ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್ ಜಿ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ವಿಶ್ವವಿದ್ಯಾಲಯ ಸ್ಥಾಪನೆ ಜವಾಬ್ದಾರಿಯನ್ನು ಅಜೀಂ ಪ್ರೇಮ್ ಜೀ ಫೌಂಡೇಷನ್ ವಹಿಸಿಕೊಂಡಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಜತೆ ಅಜೀಂ ಪ್ರೇಮ್ ಜಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಯೋಜನೆ ಈಗ ಪ್ರಸ್ತಾವನೆ ಹಂತದಲ್ಲಿದೆ. ವಿವಿ ಸ್ಥಾಪನೆಗೆ ಇನ್ನೂ ಜಾಗ ಗುರುತಿಸಿಲ್ಲವಾದರೂ ಬಹುತೇಕ ಮೈಸೂರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿವಿ ಸ್ಥಾಪನೆಯ ಉದ್ದೇಶ ಹಾಗೂ ಅದರಿಂದ ಆಗುವ ಅನುಕೂಲಗಳನ್ನು ವಿವರಿಸಿ ಪ್ರತಿಷ್ಠಾನ ಈಗಾಗಲೇ ಮುಖಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಸೋಮವಾರ ಪತ್ರ ಬರೆದಿದೆ.ವಿವಿ ಸ್ಥಾಪನೆಗೆ ಮುನ್ನ ವಿಧಾನ ಮಂಡಲದ ಉಭಯ ಸದನಗಳಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕ ಮಂಡನೆಯಾಗಿ ಅನುಮೋದನೆ ಸಿಗಬೇಕು. ಈ ಬಗ್ಗೆ ಗಮನ ಹರಿಸುವಂತೆ ಸರಕಾರಕ್ಕೆ ಅಜೀಂ ಮನವಿ ಮಾಡಿದ್ದಾರೆ.

ವಿವಿ ಸ್ಥಾಪನೆ ಉದ್ದೇಶ
ರಾಜ್ಯಕ್ಕೆ ಅತ್ಯುತ್ತಮ ಶಿಕ್ಷಣ ತಜ್ಞರ ಅಗತ್ಯವಿದೆ. ಹೀಗಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕಾದರೆ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರನ್ನು ಕೊಡಬೇಕಿದೆ. ಅದಕ್ಕೆ ವಿವಿ ಸಕಲ ರೀತಿಯಲ್ಲಿ ನೆರವಾಗಲಿದೆ.ಅಲ್ಪ ಕಾಲಾವಧಿ ಕೋರ್ಸ್‌ಗಳನ್ನು ಆರಂಭಿಸಿ,ಸರಕಾರ ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರನ್ನು ಕೊಡಬೇಕಿದೆ.ಅದಕ್ಕಾಗಿ ವಿವಿಯಲ್ಲಿ ನಾನಾ ರೀತಿಯ ಕೋರ್ಸ್‌ಗಳು ಆರಂಭವಾಗಲಿವೆ.

(ಸ್ನೇಹಸೇತು:ವಿಜಯ ಕರ್ನಾಟಕ)

ಇಂಜಿನಿಯರಿಂಗ್ ಅಧ್ಯಾಪಕರಿಗೆ ವಿಪ್ರೋ ಕೈಪಿಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+