ಗಾಜಿಯಾಬಾದ್ ನಲ್ಲಿ ರೈಲುಗಳು ಡಿಕ್ಕಿ 1 ಸಾವು

ನವದೆಹಲಿ, ಆ. 12 : ಒಂದೇ ಹಳಿ ಮೇಲೆ ಚಲಿಸುತ್ತಿದ್ದ ಎರಡು ರೈಲಗಳು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟು, ಐದು ಜನ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಗಾಜಿಯಾಬಾದ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ 6 ಗಂಟೆ ಹೊತ್ತಿಗೆ ಪದ್ಮಾವತಿ ಎಕ್ಸ್ ಪ್ರೆಸ್ ಮತ್ತು ಕಾಲಿಂದ ಎಕ್ಸ್ ಪ್ರೆಸ್ ರೈಲು ಗಳು ನಡುವೆ ಡಿಕ್ಕಿ ಹೊಡೆದಿವೆ. ನಗರದ ಹೊರವಲಯದ ಆನಂದ ವಿಹಾರ ಮತ್ತು ಶಾಹಿಬಾಬಾದ್ ರೈಲು ನಿಂತಿದ್ದ ರೈಲೊಂದಕ್ಕೆ ಹಿಂದಿನಿಂದ ಬಂದ ಇನ್ನೊಂದು ರೈಲು ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಐದು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಕಾನ್ಪುರ್ ಬಿವಾನಿ ಕಾಲಿಂದ ಎಕ್ಸ್ ಪ್ರೆಸ್ ರೈಲಿನ ಹಳಿ ತಪ್ಪಿದೆ. ಅನೇಕರಿಗೆ ಗಾಯಾಳುಗಳಾಗಿದ್ದಾರೆ. ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಮುಂದುರೆದಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿ ಸ್ಥಳಕ್ಕೆ ಆಗಮಿಸಿದ್ದು, ಘಟನಾಸ್ಥಳದ ಪರಿಶೀಲನೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+