ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಕೆ.ಜಿ ತೂಕದ ವಿಶ್ವದ ಬೃಹತ್ ಕೈಬಳೆ ಕಂಡೀದ್ದೀರಾ?

By Staff
|
Google Oneindia Kannada News

World's largest gold bangle from Tata Gold Plusಈರೋಡ್, ಆ.12: ಆಭರಣ ತಯಾರಕರೊಬ್ಬರು ಆರು ಅಡಿ ವ್ಯಾಸ ಹಾಗೂ ಆರು ಇಂಚು ದಪ್ಪದ ಬಂಗಾರದ ಕೈಬಳೆಯನ್ನು ಸೃಷ್ಟಿಸಿದ್ದಾರೆ. ತಮಿಳುನಾಡಿನ ಈರೋಡ್ ಜಿಲ್ಲೆ ಟಾಟಾ ಗೋಲ್ಡ್ ಪ್ಲಸ್ ಬಳೆಯ ವಿನ್ಯಾಸ ಮಾಡಿದ್ದು ಇದರ ತಯಾರಿಕೆಗೆ 24 ಕೆ.ಜಿ ಚಿನ್ನವನ್ನು ಬಳಸಿದ್ದಾರೆ.

ಸರಿ ಇಷ್ಟು ಬೃಹತ್ ಗಾತ್ರದ ಬಳೆ ಯಾವುದೇ ದಾಖಲೆ ಪುಸ್ತಕಕ್ಕೆ ಇನ್ನೂ ಸೇರ್ಪಡೆಯಾಗಲಿಲ್ಲವೆ?ಎಂದರೆ ಆಗದೇ ಇರುತ್ತದೇ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಭದ್ರ ಸ್ಥಾನಪಡೆದಿದ್ದು 2009ರ ಸಂಚಿಕೆಯಲ್ಲಿ ಪ್ರಕಟವಾಗಲಿದೆ. ''ಈ ಬೃಹತ್ ಬಳೆಯ ಸೃಷ್ಟಿಯನ್ನು ನೋಡಿದರೆ ಹೆಮ್ಮೆ ಅನಿಸುತ್ತಿದೆ. ಈ ರೀತಿಯ ಯಾವುದೇ ದಾಖಲೆಯನ್ನು ಈ ಹಿಂದೆ ನಾವು ಕಂಡಿಲ್ಲ, ಕೇಳಿಲ್ಲ'' ಎನ್ನ್ನುತ್ತಾರೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ಪ್ರಧಾನ ಸಂಪಾದಕ ಅರ್ತಿ ಮುತ್ತಣ್ಣ ಸಿಂಗ್. ದೇಶದ ಹೆಮ್ಮೆಯನ್ನು ಸಾರಲು ತಯಾರಕರು ಬೃಹತ್ ಬಳೆ ಸೃಷ್ಟಿಗೆ ಕೈ ಹಾಕಿದ್ದರು. 30ಜನ ಕಾರ್ಮಿಕರು ಹಗಲು ಇರುಳು ಎನ್ನದೆ 21 ದಿನಗಳ ಕಾಲ ಶ್ರಮಿಸಿ ಈ ಬೃಹತ್ ಬಳೆಯನ್ನು ತಯಾರಿಸಿದ್ದಾರೆ.

ಈ ರೀತಿ ಬಳೆ ಸೃಷ್ಟಿಸಬೇಕೆಂಬ ಕಲ್ಪನೆಯ ಕೂಸು ಹುಟ್ಟಿದ್ದು ಆರು ತಿಂಗಳ ಹಿಂದಷ್ಟೇ. ಕಲ್ಪನೆಯ ಕೂಸನ್ನು ಸಾಕಾರಗೊಳಿಸಲು 30 ಮಂದಿ ಕಾರ್ಮಿಕರು 21 ದಿನಗಳ ಶ್ರಮಿಸಿದ್ದಾರೆ ಎನ್ನುತ್ತಾರೆ ಟಾಟಾ ಗೋಲ್ಡ್ ಪ್ಲಸ್‍ನ ಉಪಾಧ್ಯಕ್ಷರಾದ ನಟರಾಜನ್. ಮಕ್ಕಳು,ವೃದ್ಧರು,ಮಹಿಳೆಯರು ಎನ್ನದೆ ಎಲ್ಲರನ್ನೂ ಈ ಬಳೆ ಸ್ಪರ್ಶಮಣಿಯಂತೆ ಆಕರ್ಷಿಸುತ್ತಿದೆ. ಇನ್ನ್ನೇನು ವರಮಹಾಲಕ್ಷ್ಮಿ ಹಬ್ಬ ಸಹ ಸಮೀಪಿಸುತ್ತಿದ್ದು ಭಾರತದಲ್ಲಿ ಚಿನ್ನ ವ್ಯಾಪರ ಅಂಬರ ಮುಟ್ಟಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X