ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಮುಗಿದು ಒಳಗೆ ಬನ್ನಿ ಇದು ಪರಿಸರ ತಾಣ!

By Staff
|
Google Oneindia Kannada News

ನವದೆಹಲಿ, ಆ.12: ಪರಿಸರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕಲು ಹಾಗೂ ಹಂಚಿಕೊಳ್ಳಲು ಹೊಸ ಅಂತರ್ಜಾಲ ತಾಣ ಒಂದನ್ನು ಸಾರ್ವಜನಿಕರ ಹಾಗೂ ತಜ್ಞರ ಅನುಕೂಲಕ್ಕಾಗಿ ಪರಿಸರ ಮತ್ತು ವಿಜ್ಞಾನ ಕೇಂದ್ರ(ಸಿಎಸ್‍ಇ) ಪ್ರಾರಂಭಿಸಿದೆ.

www.indiaenvironmentpoartal.org.in ಎಂಬ ಅಂತರ್ಜಾಲ ತಾಣ ಪರಿಸರ, ಅರಣ್ಯ, ನೀರು, ಗಣಿಗಾರಿಕೆ, ಶಕ್ತಿ ಸಂಪನ್ಮೂಲಗಳು ಹೀಗೆ ಪರಿಸರಕ್ಕೆ ಸಂಬಂಧಿಸಿದ ಹತ್ತು ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಲಿದೆ. ಈ ಅಂತರ್ಜಾಲ ತಾಣದಲ್ಲಿ ಮಾಹಿತಿಯನ್ನು ಪಡೆಯಬಹುದು ಹಾಗೂ ಹೆಚ್ಚಿನ ವಿಷಯ ನಿಮಗೆ ಗೊತ್ತಿದ್ದರೆ ಅಂತರ್ಜಾಲದಲ್ಲಿ ಸೇರಿಸಿ ಹಲವರೊಂದಿಗೆ ಹಂಚಿಕೊಳ್ಳಬಹುದು. ಇದೊಂದು ಸಾರ್ವಜನಿಕರಿಗೆ ತೆರೆದಿಟ್ಟ ಮುಕ್ತ ಅಂತರ್ಜಾಲ ತಾಣ. ಮಾಹಿತಿಯ ಮಹಾದ್ವಾರದಲ್ಲಿ ಯಾರು ಬೇಕಾದರೂ ಬದಲಾವಣೆಗಳನ್ನು ತರಬಹುದು ಎಂದು ಸಿಎಸ್‌ಇ ಮುಖ್ಯಸ್ಥೆ ಸುನಿತಾ ನಾರಾಯಣ್ ತಿಳಿಸಿದರು.

ರಾಷ್ಟ್ರೀಯ ಜ್ಞಾನ ಆಯೋಗದ ಬೆಂಬಲದೊಂದಿಗೆ ಈ ಅಂತರ್ಜಾಲ ತಾಣವನ್ನು ರೂಪಿಸಲಾಗಿದ್ದು ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒದಗಿಸಲು ಈ ತಾಣ ವೇದಿಕೆಯಾಗಲಿದೆ. ಮುಖ್ಯವಾದ ಮತ್ತೊಂದು ವಿಚಾರವೆಂದರೆ ಸಾರ್ವಜನಿಕರು ತಮ್ಮ ಜ್ಞಾನವನ್ನು ಈ ತಾಣಕ್ಕೆ ಒದಗಿಸಬಹುದು. ಪರಿಸರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಜನರ ಬಳಿಗೆ ಕೊಂಡೊಯ್ಯುವುದೇ ಈ ತಾಣದ ಪ್ರಮುಖ ಉದ್ದೇಶ. ಪರಿಸರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಈ ತಾಣ ಸಹಕರಿಸಲಿದೆ ಎಂದು ರಾಷ್ಟ್ರೀಯ ಜ್ಞಾನ ಆಯೋಗದ ಸ್ಯಾಮ್ ಪಿಟ್ರೋಡಾ ತಿಳಿಸಿದರು.

ಪರಿಸರಕ್ಕೆ ಸಂಬಂಧಿಸಿದ 3 ಲಕ್ಷಕ್ಕೂ ಅಧಿಕ ಲೇಖನ ಹಾಗೂ ದಾಖಲೆಗಳನ್ನು ಹೊಂದಿರುವ ಈ ತಾಣದಲ್ಲಿ ವಾತಾವರಣಹಾಗೂ ಪರಿಸರಕ್ಕೆ ಸಂಬಂಧಿಸಿದ ಮತ್ತಷ್ಟು ಆಳವಾದ ವಿವರಗಳುಳ್ಳ ಲೇಖನ ಮತ್ತಿತರ ಸಾಮಗ್ರಿಯನ್ನು ಹೊಂದಿದೆ. ಪ್ರಸ್ತತ ಈ ತಾಣದಲ್ಲಿನ ಸಮಸ್ತ ಮಾಹಿತಿಯು ಇಂಗ್ಲಿಷ್‌ನಲ್ಲಿದ್ದು ಶೀಘ್ರದಲ್ಲೇ ವಿವಿಧ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಸ್ಯಾಮ್ ಪಿಟ್ರೋಡಾ ತಿಳಿಸಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X