ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಪಠ್ಯಕ್ರಮ ರೂಪಿಸಲು ಮುಂದಾದ ನಾಸ್ಕಾಂ

By Staff
|
Google Oneindia Kannada News

ಬೆಂಗಳೂರು, ಆ.12: ಐಟಿ ಕಂಪನಿಗಳೊಂದಿಗೆ ಕೈ ಜೋಡಿಸಿ ಮಾಹಿತಿ ತಂತ್ರಜ್ಞಾನ ಪಠ್ಯಕ್ರಮ ರೂಪಿಸಲಾಗುತ್ತದೆ ಎಂದು ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಘಟನೆ (ನಾಸ್‌ಕಾಮ್) ಅಧ್ಯಕ್ಷ ಸೋಮ್ ಮಿತ್ತಲ್ ತಿಳಿಸಿದ್ದಾರೆ.

ಐಟಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳನ್ನು ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಅರ್ಹರಾಗುವಂತೆ ಸಿದ್ಧಗೊಳಿಸಲು ಈಗಾಗಲೇ ಹಲವು ಕಂಪನಿಗಳು ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಈ ರೀತಿ ಕಂಪನಿಗಳ ನೆರವು ಪಡೆದು 130 ಗಂಟೆಗಳ ಪಠ್ಯಕ್ರಮ ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ನವೀನ ತಂತ್ರಜ್ಞಾನ, ವಿವಿಧ ಕೌಶಲಗಳ ತರಬೇತಿ ಮತ್ತಿತರ ವಿಷಯಗಳನ್ನು ಪಠ್ಯಕ್ರಮ ಒಳಗೊಂಡಿರುತ್ತದೆ ಎಂದು ಮಿತ್ತಲ್ ವಿವರಿಸಿದರು.

ಕಂಪನಿಗಳು ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಾಗ ಅವರಿಗೆ 18ರಿಂದ 20 ವಾರಗಳ ತರಬೇತಿ ನೀಡಬೇಕಾಗುತ್ತದೆ. ಇದು ತುಂಬ ಖರ್ಚಿನಿಂದ ಕೂಡಿದ ವ್ಯವಹಾರ. ಈ ಆರಂಭಿಕ ತರಬೇತಿಯನ್ನು ಕನಿಷ್ಠ ಎರಡು ವಾರಗಳಿಗೆ ಸೀಮಿತಗೊಳಿಸಿದರೆ ಕಂಪನಿಗಳಿಗೆ ಹೆಚ್ಚಿನ ಹೊರೆ ತಪ್ಪುತ್ತದೆ ಎಂದು ಮಿತ್ತಲ್ ಅಭಿಪ್ರಾಯಪಟ್ಟರು.

(ಏಜೆನ್ಸೀಸ್)

ಇಂಜಿನಿಯರಿಂಗ್ ಅಧ್ಯಾಪಕರಿಗೆ ವಿಪ್ರೋ ಕೈಪಿಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X