ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರ ಯೋಧರಿಗೆ ಚಿನ್ನದ ಪದಕ ಅರ್ಪಿಸಲು ಕೋರಿಕೆ

By Staff
|
Google Oneindia Kannada News

ಚಂಡೀಗಡ, ಆ. 12 : ದೇಶಕ್ಕಾಗಿ ಜೀವ ಹಂಗು ತೊರೆದು ಗಡಿಯಲ್ಲಿ ಹೋರಾಡುತ್ತಿರುವ ವೀರಯೋಧರಿಗೆ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಗಳಿಸಿರುವ ಚಿನ್ನದ ಪದಕವನ್ನು ಅರ್ಪಿಸು ಎಂದು ಪುತ್ರ ಅಭಿನವ್ ಗೆ ಹೇಳುವೆ ಎಂದು ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದಿರುವ ಅಭಿನವ್ ಬಿಂದ್ರಾ ಅವರ ತಂದೆ ಎ.ಎಸ್.ಬಿಂದ್ರಾ ಅವರು ನುಡಿಗಳಿವು

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊಟ್ಟಮೊದಲ ಬಾರಿಗೆ ಚಿನ್ನದ ಪದಕ ಕೀರ್ತಿಗೆ ಪಾತ್ರನಾಗಿರುವ ಪುತ್ರನನ್ನು ಪ್ರಧಾನಮಂತ್ರಿ ಸೌಜನ್ಯ ಭೇಟಿಗೆ ಆಹ್ವಾನಿಸಿದ್ದಾರೆ. ಪ್ರಧಾನಮಂತ್ರಿ ಎದುರು ತಮ್ಮ ಮಗನಿಗೆ ದೇಶ ಕಾಯುವ ವೀರಯೋಧನಿಗೆ ಚಿನ್ನದ ಪದಕವನ್ನು ಅರ್ಪಿಸು ಎಂದು ಹೇಳುವೆ ಎಂದು ಎ.ಎಸ್.ಬಿಂದ್ರಾ ಹೇಳಿದರು.

ಪುತ್ರನ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಭಾರತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಬರ ಎದುರಿಸುತ್ತಿತ್ತು. ಅದನ್ನು ತಮ್ಮ ಪುತ್ರ ಈಡೇರಿಸಿದ್ದಾನೆ. ಪುತ್ರನ ಸಾಧನೆಗೆ ಇಡೀ ಭಾರತ ದೇಶವೇ ಕೊಂಡಾಡುತ್ತಿದೆ. ಒಬ್ಬ ತಂದೆಗೆ ಇದಕ್ಕಿಂತ ಹೆಚ್ಚಿನದೇನು ಬೇಕು. ಪದಕ ಪಡೆದಿದ್ದು ತಿಳಿಯುತ್ತಿದ್ದಂತೆಯೇ ಭಾರತ ಹುಚ್ಚೆದ್ದು ಕುಣಿಯಿತು, ಕುಪ್ಪಳಿಸಿತು. ಅನೇಕ ಹೋಮ ಹವನಗಳು ನಡೆದವು. ಪುತ್ರನ ಈ ಸಾಧನೆಗೆ ದೊರೆಯಲಿರುವ ಎಲ್ಲ ಗೌರವಕ್ಕೂ ಆತನೇ ವಾರಸುದಾರ. ನಾನು ಒಬ್ಬ ತಂದೆಯಾಗಿ ಮಗನ ಆಸೆಗೆ ಎಂದೂ ಅಡ್ಡಿ ಬರಲಿಲ್ಲ. ಶೂಟಿಂಗ್ ಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದೆ. ಪರಿಶ್ರಮಪಟ್ಟಿದ್ದರಿಂದ ಇಂದು ಅಭಿನವ್ ದೊಡ್ಡ ಮಟ್ಟದ ಗೌರವಕ್ಕೆ ಪಾತ್ರನಾಗಿದ್ದಾನೆ. ನನಗೆ ಸಂತೋಷವಾಗಿದೆ ಎಂದು ಎ.ಎಸ್.ಬಿಂದ್ರಾ ಪುತ್ರನ ಸಾಧನೆಯನ್ನು ಪ್ರಶಂಸಿಸಿದರು.

(ದಟ್ಸ್ ಕನ್ನಡ ವಾರ್ತೆ)
ಒಲಿಂಪಿಕ್ಸ್ : ಭಾರತದ ಅಭಿನವ್ ಬಿಂದ್ರಾಗೆ ಬಂಗಾರ
ಬಿಂದ್ರಾಗೆ ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X