ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿಯಲ್ಲಿ ದಾವೂದ್ ಇಬ್ರಾಹಿಂ ಸೋದರನ ಬಂಧನ

By Staff
|
Google Oneindia Kannada News

ಸೌದಿ, ಆ. 12 : ಕುಖ್ಯಾತ ಭೂಗತದೊರೆ ದಾವೂದ್ ಇಬ್ರಾಹಿಂ ಅವರ ಸೋದರ ಅನೀಸ್ ಇಬ್ರಾಹಿಂ ಅವರನ್ನು ಬಂಧಿಸಿರುವುದಾಗಿ ಜೆಡ್ಡಾ ವಿಮಾನ ನಿಲ್ದಾಣದ ಪೊಲೀಸರು ಹೇಳಿದ್ದಾರೆ. ಅನೀಸ್ ಅವರ ಮೇಲೆ ನಕಲಿ ಪಾಸ್ ಪೊರ್ಟ್ ಹೊಂದಿದ್ದ ಆರೋಪವನ್ನು ಹೊರೆಸಲಾಗಿದ್ದು, ಇಂಟರ್ ಪೋಲ್ ನೆರವಿನಿಂದ ಬಂಧನ ಸಾಧ್ಯವಾಯಿತು ಎಂದು ಹೇಳಲಾಗಿದೆ.

ಅನೀಸ್ ಅವರಿಗೆ ಅಮೆರಿಕ ದೇಶದಿಂದ ಪಾಸ್ ಪೋರ್ಟ್ ನೀಡಲಾಗಿದ್ದು, ಹಲವಾರು ಸಂಶಯಕ್ಕೆ ಈಡುಮಾಡಿದೆ. 1993 ರ ಮುಂಬೈ ಸರಣಿಸ್ಫೋಟ ಹಿಂದಿನ ರುವಾರಿ ಅನೀಸ್ ಇಬ್ರಾಹಿಂರನ್ನು ಹಿಡಿಯಲು ಭಾರತ ಸರ್ಕಾರ ಇಂಟರ್ ಪೋಲ್ ಪೊಲೀಸರ ನೆರವು ಕೇಳಿದ್ದರು. ಅನೀಸ್ ಅವರನ್ನು ಈ ಮುಂಚೆ 2002ರಲ್ಲಿ ದುಬೈ ನಲ್ಲಿ ಹಾಗೂ 1996 ರಲ್ಲಿ ಬಹರೇನ್ ನಲ್ಲಿ ಬಂಧಿಸಲಾಗಿತ್ತು. ಆದರೆ ಜಾಮೀನು ಪಡೆದು ಹೊರಬಂದಿದ್ದರು. ಮುಂಬೈ ಸರಣಿ ಸ್ಫೋಟ ನಡೆಸಿದ ಆರೋಪವಲ್ಲದೆ ಸುಮಾರು 70 ಪ್ರಕರಣಗಳಲ್ಲಿ ಅನೀಸ್ ಅವರನ್ನು ಆರೋಪಿ ಎಂದು ಗುರುತಿಸಲಾಗಿದೆ. ಅನೀಸ್ ಎರಡು ಬಾರಿ ಬಂಧನಕ್ಕೆ ಒಳಪಟ್ಟರೂ ಭಾರತಕ್ಕೆ ಕರೆತರುವಲ್ಲಿ ಸಿಬಿಐ ವಿಫಲವಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X