ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ :ರಾಜ್ಯವರ್ಧನ್ ಸಿಂಗ್ ಗೆ ಸೋಲು

By Staff
|
Google Oneindia Kannada News

Rajyavardhan rathoreಬೀಜಿಂಗ್, ಆ. 12 : 2004ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರಾಜ್ಯವರ್ಧನ ಸಿಂಗ್ ರಾಥೋಡ್ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಭಾರತಕ್ಕೆ ಪದಕ ತಂದು ಕೊಡುವ ಆಟಗಾರನೆಂಬ ಬಿಂಬಿತರಾಗಿದ್ದ ರಾಥೋಡ್ ಪದಕ ಶೂಟಿಂಗ್ ಟ್ರಾಪ್ ಇವೆಂಟ್ ನ ಫೈನಲ್ ಸುತ್ತು ತಲುಪುವಲ್ಲಿ ವಿಫಲರಾಗಿ ಭಾರತೀಯ ಕ್ರೀಡಾಪ್ರೇಮಿಗಳಿಗೆ ಭಾರಿ ನಿರಾಶೆ ಮೂಡಿಸಿದ್ದಾರೆ.

ಸೋಮವಾರ ಅಭಿನವ್ ಬಿಂದ್ರಾ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೀರ್ತಿ ಪತಾಕೆ ಹಾರಿಸಿದ್ದ ಬೆನ್ನಲ್ಲೇ ರಾಜ್ಯವರ್ಧನ್ ಸಿಂಗ್ ಅವರ ಸೋಲು ಕ್ರೀಡಾಭಿಮಾನಿಗಳಲ್ಲಿ ಭಾರಿ ನಿರಾಶೆ ಮೂಡಿಸಿದೆ. ಪ್ರಪ್ರಥಮ ಭಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಆಟದಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದು ಭಾರತೀಯರು ಹೆಮ್ಮೆ ಪಡುವಂತೆಮಾಡಿದ್ದರು. ರಾಜವರ್ಧನ್ ಸಿಂಗ್ ರಾಥೋಡ್ ಮೇಲೆಯೂ ಅದೇ ವಿಶ್ವಾಸವನ್ನು ಇರಿಸಲಾಗಿತ್ತು. ಕಳೆದ 2004ರ ಅಥೆನ್ಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಡಬಲ್ಸ್ ಶೂಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶ ಕ್ರೀಡಾಪ್ರೇಮಿಗಳ ಅಭಿಮಾನಕ್ಕೆ ಪಾತ್ರರಾಗಿದ್ದರು. ಆದರಿಂದಾಗಿ ರಾಥೋಡ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಫೈನಲ್ ತಲುಪುವಲ್ಲಿ ವಿಫಲರಾಗಿ ಪ್ರೇಕ್ಷಕರ ಆಸೆಯನ್ನು ರಾಥೋಡ್ ಭಗ್ನಗೊಳಿಸಿದ್ದಾರೆ.

ಸಮರೇಶ್ ಜಂಗ್ ಕೂಡ 50 ಮೀ. ಪಿಸ್ತೂಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. 2006ರ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಬಂಗಾರ ಗಳಿಸಿದ್ದ ಸಮರೇಶ್ ಮೇಲೆ ಅಪಾರ ನಿರೀಕ್ಷೆಯಿತ್ತು.

(ದಟ್ಸ್ ಕನ್ನಡ ವಾರ್ತೆ)

ಒಲಿಂಪಿಕ್ಸ್ : ಮೊದಲ ಸುತ್ತಿನಲ್ಲೇ ಹೊರಬಿದ್ದ ಸಾನಿಯ
ಬೀಜಿಂಗ್ ಒಲಿಂಪಿಕ್ಸ್: ಕ್ವಾರ್ಟರ್ ಪೈನಲ್ ಗೆ ಸೈನಾ
ಒಲಿಂಪಿಕ್ಸ್ : ಭಾರತದ ಅಭಿನವ್ ಬಿಂದ್ರಾಗೆ ಬಂಗಾರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X